Saturday, June 6, 2026
Homeತಾಜಾ ಸುದ್ದಿಕನ್ಯಾಡಿ: ಶ್ರೀ ಗುರುದೇವ ಮಠದಲ್ಲಿ ಗುರುಪೂರ್ಣಿಮೆಯಂದು ಚಾತುರ್ಮಾಸ್ಯ ವೃತಾರಂಭ

ಕನ್ಯಾಡಿ: ಶ್ರೀ ಗುರುದೇವ ಮಠದಲ್ಲಿ ಗುರುಪೂರ್ಣಿಮೆಯಂದು ಚಾತುರ್ಮಾಸ್ಯ ವೃತಾರಂಭ

- Advertisement -
- Advertisement -

ಕನ್ಯಾಡಿ: ೧೩.೦೭.೨೦೨೨ನೇ ಬುಧವಾರ ಗುರುಪೂರ್ಣಿಮೆಯಂದು ಮೂಲಮಠ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಶ್ರೀ ಗುರುದೇವ ಮಠದಲ್ಲಿ ಚಾತುರ್ಮಾಸ್ಯ ವೃತಾರಂಭ ವಿಜೃಂಭಣೆಯಿಂದ ನಡೆಯಲಿದೆ.  

ಅಂದು ಬೆಳಗ್ಗೆ ಹತ್ತು ಗಂಟೆಯಿಂದ ಹನ್ನೊಂದು ಮೂವತ್ತರವರೆಗೆ ಭಜನಾ ಕಾರ್ಯಕ್ರಮ, ಹನ್ನೊಂದು ಮೂವತ್ತರಿಂದ ಹನ್ನೆರಡು ಮೂವತ್ತರವರೆಗೆ ಭಕ್ತಾದಿಗಳಿಂದ ಗುರುಪಾದುಕಾ ಪೂಜೆ ನಡೆಯಲಿದೆ. ಗುರುಗಳಿಂದ ಫಲ ಮಂತ್ರಾಕ್ಷತೆ ವಿತರಣೆ ಹಾಗೂ ಅನ್ನಪ್ರಸಾದ ವಿತರಣೆ ಕೂಡಾ ನಡೆಯಲಿದೆ.

ಚಾತುರ್ಮಾಸ್ಯ ವೃತದ ಸಮಾಪ್ತಿಯು ೨೯.೦೮.೨೦೨೨ ನೇ ಸೋಮವಾರದಂದು ಮುಕ್ತಾಯಗೊಳ್ಳಲಿದೆ. ಚಾತುರ್ಮಾಸ್ಯದ ಪ್ರಯುಕ್ತ ಪ್ರತಿ ಶನಿವಾರ ಸಾಯಂಕಾಲ ಆರು ಗಂಟೆಯಿಂದ ರಾತ್ರಿ ಹತ್ತು ಗಂಟೆಯವರೆಗೆ ಭಕ್ತಿಪ್ರಧಾನ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ

- Advertisement -

Latest News

error: Content is protected !!