Saturday, May 18, 2024
Homeಕರಾವಳಿಬಂಟ್ವಾಳ : ಮಾಣಿ ಗ್ರಾಮದಲ್ಲಿ ಜಲ್ ಜೀವನ್ ಮಿಷನ್ ಯೋಜನೆಗೆ ಚಾಲನೆ

ಬಂಟ್ವಾಳ : ಮಾಣಿ ಗ್ರಾಮದಲ್ಲಿ ಜಲ್ ಜೀವನ್ ಮಿಷನ್ ಯೋಜನೆಗೆ ಚಾಲನೆ

spot_img
- Advertisement -
- Advertisement -

ಬಂಟ್ವಾಳ : ಪ್ರಧಾನಿ ನರೇಂದ್ರ ಮೋದಿಯವರ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಜಲ್ ಜೀವನ್ ಮಿಷನ್ ಯೋಜನೆಯಡಿ ಮಾಣಿ ಗ್ರಾಮದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ರೂ 69 ಲಕ್ಷ ಅನುದಾನದಲ್ಲಿ ನಡೆಯಲಿರುವ ಸೂರಿಕುಮೇರು ಹಳಿರ 50,000 ಲೀ ಸಾಮರ್ಥ್ಯದ ಟ್ಯಾಂಕ್,ಪಳ್ಳತ್ತಿಲ್ಲ 50,000 ಲೀ ಸಾಮರ್ಥ್ಯದ ಟ್ಯಾಂಕ್,ಭರಣಿಕೆರೆ 50,000 ಲೀ ಸಾಮರ್ಥ್ಯದ ಟ್ಯಾಂಕ್,ಮಾಣಿ ಕಾಪಿಕಾಡು ಒಂದು ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕ್ ಕಾಮಗಾರಿಗಳಿಗೆ ಬಂಟ್ವಾಳದ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.



ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಜಲ್ ಜೀವನ್ ಮಿಷನ್ ಯೋಜನೆಯಡಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ 30 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಯುತ್ತಿದ್ದು ಇದಕ್ಕೆ 33.72 ಕೋಟಿ ಅನುದಾನ ಬಿಡುಗಡೆಗೊಂಡಿದೆ. ಈ ಯೋಜನೆಯನ್ನು ಪ್ರಾರಂಭಿಸಿದ ಪ್ರಧಾನಿಯವರಿಗೆ ಗ್ರಾಮೀಣ ಜಲ ಕಾಳಜಿ ಮೆಚ್ಚುವಂತದ್ದು ಎಂದರು.

ಪಂಚಾಯತ್ ಸದಸ್ಯ ನಾರಾಯಣ ಶೆಟ್ಟಿ,ಮಾಜಿ ಜಿ.ಪಂ ಸದಸ್ಯೆ ಮಂಜುಳಾ ಮಾವೆ, ಬಿಜೆಪಿ ಕ್ಷೇತ್ರ ಕಾರ್ಯದರ್ಶಿ ಗಣೇಶ್ ರೈ,ನೇರಳಕಟ್ಟೆ ಸೊಸೈಟಿ ಅಧ್ಯಕ್ಷರಾದ ಪುಷ್ಪರಾಜ್ ಚೌಟ, ಹರೀಶ್ ಕುಲಾಲ್,ಪಂಚಾಯತ್ ಸದಸ್ಯೆ ಮಿತ್ರಾಕ್ಷಿ,ಪ್ರಮಿತ್ ಶೆಟ್ಟಿ,ಜನಾರ್ಧನ ಪೂಜಾರಿ,ನಾರಾಯಣ ಭಟ್ ,ರಾಜೇಶ್ ಕುಲಾಲ್,ಉಮೇಶ್ಎಸ್.ಪಿ,ಪ್ರಜ್ವಲ್ ಯತೀಶ್ ಶೆಟ್ಟಿ,ನವೀನ್,ನೋಣಯ್ಯ ನಾಯ್ಕ,ದಿವಾಕರ ಕುಲಾಲ್,ಪಂಚಾಯತ್ ಅಭಿವೃದ್ಧಿ ಅಧಿಕಾರಿ,ಇಂಜಿನಿಯರ್ ಹಾಗೂ ಗುತ್ತಿಗೆದಾರರು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!