ಬೆಂಗಳೂರು: ದರ್ಶನ್ ಮನೆಯೂಟಕ್ಕೆ ಅವಕಾಶ ನೀಡುವಂತೆ ಕೇಳಿ ಹೈಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಮೊನ್ನೆ ನಡೆದಿತ್ತು. ಈ ವೇಳೆ ಸೆಲೆಬ್ರೆಟಿ ಅಂದ ಮಾತ್ರಕ್ಕೆ ಮನೆಯೂಟ ನೀಡಲು ಸಾಧ್ಯವಿಲ್ಲ. ಎಲ್ಲಾ ಕೈದಿಗಳು ಸಮಾನ ಎಂದು ಹೇಳಿ ವಿಚಾರಣೆಯನ್ನು ಆಗಸ್ಟ್ 20ಕ್ಕೆ ಮುಂದೂಡಿಕೆ ಮಾಡಿತ್ತು.
ಇದೇ ವೇಳೆ ಈ ಬಗ್ಗೆ 10 ದಿನಗಳಲ್ಲಿ ನಿರ್ಧಾರ ಕೈಗೊಳ್ಳುವಂತೆ ಜೈಲು ಅಧಿಕಾರಿಗಳಿಗೆ ಹೈಕೋರ್ಟ್ ನಿರ್ದೇಶನ ನೀಡಿತ್ತು. ಅಲ್ಲದೇ ಅವರಿಗೆ ಅರ್ಜಿ ಸಲ್ಲಿಸುವಂತೆಯೂ ನಟ ದರ್ಶನ್ ಪರ ವಕೀಲರಿಗೆ ಸೂಚಿಸಿತ್ತು. ಹೈಕೋರ್ಟ್ ನಿರ್ದೇಶನದಂತೆ ನಟ ದರ್ಶನ್ ಜೈಲು ಊಟ ಬೇಡ. ಮನೆಯೂಟಕ್ಕೆ ಅವಕಾಶ ನೀಡುವಂತೆ ಜೈಲು ಅಧಿಕಾರಿಗಳಿಗೆ ಮನವಿಯನ್ನು ಲಿಖಿತ ರೂಪದಲ್ಲಿ ಸಲ್ಲಿಸಿದ್ದರು. ಈ ಮನವಿಯನ್ನು ಪರಿಶೀಲಿಸಿದಂತ ಜೈಲು ಅಧಿಕಾರಿಗಳು, ಕಾನೂನಿನಲ್ಲಿ ಕೊಲೆ ಆರೋಪಿಗೆ ಮನೆಯೂಟಕ್ಕೆ ಅವಕಾಶವಿಲ್ಲ ಎಂಬುದಾಗಿ ನಿರಾಕರಿಸಿದ್ದಾರೆ. ಈ ಮೂಲಕ ನಟ ದರ್ಶನ್ ಗೆ ಮತ್ತೆ ಶಾಕ್ ನೀಡಿದ್ದಾರೆ.ಹಾಗಾಗಿ ಆಗಸ್ಟ್ 20ಕ್ಕೆ ಕೋರ್ಟ್ ಏನು ಹೇಳುತ್ತಾ ಅನ್ನೋದರ ಕಡೆ ಸದ್ಯ ದರ್ಶನ್ ಚಿತ್ತ ನೆಟ್ಟಿದೆ ಎನ್ನಲಾಗಿದೆ.