Friday, June 5, 2026
Homeಕರಾವಳಿಮಂಗಳೂರುಮಂಗಳೂರು: ಕಂಬಳ ಕೋಣಗಳ ಯಜಮಾನ ಜಗದೀಶ ಆಳ್ವ ವಿಧಿವಶ

ಮಂಗಳೂರು: ಕಂಬಳ ಕೋಣಗಳ ಯಜಮಾನ ಜಗದೀಶ ಆಳ್ವ ವಿಧಿವಶ

- Advertisement -
- Advertisement -

ಮಂಗಳೂರು: ಕಂಬಳ ಕೋಣಗಳ ಯಜಮಾನ ತನ್ನ ಕೋಣಗಳಿಗಾಗಿ ಹಲವು ಜಿಲ್ಲಾ ಪ್ರಶಸ್ತಿ ಗಳಿಸಿರುವ ಪ್ರಗತಿಪರ ಕೃಷಿಕ, ಬಡಗಬೆಳ್ಳೂರು ಅತಿಕಾರಿಹಿತ್ಲುವಿನ ಜಗದೀಶ ಆಳ್ವ(63) ವಿಧಿವಶರಾಗಿದ್ದಾರೆ. ಶುಕ್ರವಾರ ಗುರುಪುರ ಕಾರಮೊಗರು ಮನೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಪತ್ನಿ, ಓರ್ವ ಪುತ್ರ ಹಾಗೂ ಅಪಾರ ಬಂಧುಮಿತ್ರರನ್ನು ಮೃತರು ಅಗಲಿದ್ದಾರೆ.ಗುರುಪುರದ ಮೂಳೂರು-ಅಡ್ಡೂರು ಕರಾವಳಿ ಜೋಡುಕರೆ ಕಂಬಳ ಟ್ರಸ್ಟ್ನ ಕೋಶಾಧಿಕಾರಿ, ಗುರುಪುರ ಬಂಟರ ಮಾತೃ ಸಂಘದ ಸಕ್ರಿಯ ಸದಸ್ಯ ಹಾಗೂ ಹಿರಿಯ ಕಲಾವಿದರೂ ಆಗಿದ್ದರು. ಮೃತರ ಅಂತ್ಯಕ್ರಿಯೆಯು ಅತಿಕಾರಿಹಿತ್ಲುವಿನಲ್ಲಿ ಶನಿವಾರ ನಡೆಯಿತು.

- Advertisement -

Latest News

error: Content is protected !!