Wednesday, September 30, 2026
Homeಕರಾವಳಿಉಡುಪಿಉಡುಪಿ: ಪ್ರಮೋದ್‌ ಮಧ್ವರಾಜ್‌ ಕಾಂಗ್ರೆಸ್‌ ತೊರೆದದ್ದು ಒಳ್ಳೆಯದೇ: ಅವರು ಬಿಜೆಪಿಗೆ ಆಘಾತ ಕೊಡೋದು ಖಚಿತ: ಕಾಂಗ್ರೆಸ್...

ಉಡುಪಿ: ಪ್ರಮೋದ್‌ ಮಧ್ವರಾಜ್‌ ಕಾಂಗ್ರೆಸ್‌ ತೊರೆದದ್ದು ಒಳ್ಳೆಯದೇ: ಅವರು ಬಿಜೆಪಿಗೆ ಆಘಾತ ಕೊಡೋದು ಖಚಿತ: ಕಾಂಗ್ರೆಸ್ ಮುಖಂಡ ಯು.ಆರ್ ಸಭಾಪತಿ ಹೇಳಿಕೆ

- Advertisement -
- Advertisement -

ಉಡುಪಿ: ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ಪಕ್ಷ ತೊರೆದದ್ದೇ ಒಳ್ಳೆಯದಾಯಿತು. ಅವರು ಮುಂದೊಮ್ಮೆ ಅದಕ್ಕೆ ಪಶ್ಚಾತಾಪ ಪಡಲಿದ್ದಾರೆ ಮತ್ತು ಬಿಜೆಪಿಗೆ ಆಘಾತ ನೀಡಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಶಾಸಕ ಯು.ಆರ್ .ಸಭಾಪತಿ ಹೇಳಿದ್ದಾರೆ.

ಉಡುಪಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಯು ಆರ್‌ ಸಭಾಪತಿ, ಕಾಂಗ್ರೆಸ್  ನಲ್ಲಿದ್ದಾಗಲೇ ಪ್ರಮೋದ್‌ ಕೇಸರಿ ಟೋಪಿ ಹಾಕಿ ತಿರುಗಾಡುತ್ತಿದ್ದರು. ನಾವು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಈ ಬಗ್ಗೆ ವಿಷಯ ತಿಳಿಸಿದ್ದೆವು. ಆದರೆ ಡಿ.ಕೆ ಶಿವಕುಮಾರ್ ಪ್ರಮೋದ್ ಮಧ್ವರಾಜ್ ಅವರನ್ನು ಓಲೈಸಲು ಪಕ್ಷದ ಉಪಾಧ್ಯಕ್ಷ ಸ್ಥಾನ ಕೊಟ್ಟರು. ಉಪಾಧ್ಯಕ್ಷ ಸ್ಥಾನ ನೀಡಿದ ಮರುದಿನವೇ ಅವರು ಬಿಜೆಪಿಗೆ ಸೇರಿದ್ದಾರೆ. ಈ ಹಿಂದೆ ಅವರ ತಾಯಿ ಮನೋರಮಾ ಮಧ್ವರಾಜ್ ಕೂಡ ಬಿಜೆಪಿಗೆ ದ್ರೋಹ ಮಾಡಿದ್ದರು. ಮುಂದೆ ಪ್ರಮೋದ್ ಮಧ್ವರಾಜ್ ಕೂಡ ಅದನ್ನೇ ಮಾಡಲಿದ್ದಾರೆ ಎಂದು ಯು.ಆರ್ ಸಭಾಪತಿ ಭವಿಷ್ಯ ನುಡಿದಿದ್ದಾರೆ.

- Advertisement -

Latest News

error: Content is protected !!