Friday, May 3, 2024
Homeತಾಜಾ ಸುದ್ದಿ“ಡೋಲೋ 650”ಗೆ ಐಟಿ ತಲೆನೋವು: ಮಾತ್ರೆ ತಯಾರಿಕಾ ಸಂಸ್ಥೆ ಮೈಕ್ರೋ ಲ್ಯಾಬ್ಸ್ ಮೇಲೆ ದಾಳಿ

“ಡೋಲೋ 650”ಗೆ ಐಟಿ ತಲೆನೋವು: ಮಾತ್ರೆ ತಯಾರಿಕಾ ಸಂಸ್ಥೆ ಮೈಕ್ರೋ ಲ್ಯಾಬ್ಸ್ ಮೇಲೆ ದಾಳಿ

spot_img
- Advertisement -
- Advertisement -

ಬೆಂಗಳೂರು: ಡೋಲೋ 650 ಮಾತ್ರೆ ತಯಾರಿಕಾ ಸಂಸ್ಥೆ ಮೈಕ್ರೋ ಲ್ಯಾಬ್ಸ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಮೈಕ್ರೋ ಲ್ಯಾಬ್ಸ್ ನೂರಾರು ಕೋಟಿಯ ಡೋಲೋ -650 ಮಾತ್ರೆ ಮಾರಾಟ ಮಾಡುವ ಮೂಲಕ ಅತೀ ಹೆಚ್ಚು ವ್ಯಾಪಾರ ವಹಿವಾಟು ನಡೆಸಿತ್ತು.

ಆ ವೇಳೆ ತೆರಿಗೆ ವಂಚಿಸಿದ್ದ ಆರೋಪ ಹಿನ್ನೆಲೆ ರೇಸ್ ಕೋರ್ಸ್ ರಸ್ತೆಯಲ್ಲಿರುವ ಮೈಕ್ರೋ ಲ್ಯಾಬ್ಸ್ ಕೇಂದ್ರ ಕಚೇರಿ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.  ಕಚೇರಿ ಅಲ್ಲದೇ ಸಿಎಂಡಿ ದಿಲೀಪ್ ಸುರಾನಾ, ಡೈರೆಕ್ಟರ್ ಆನಂದ್ ಸುರಾನ ನಿವಾಸದ ಮೇಲೂ ದಾಳಿ ನಡೆಸಲಾಗಿದೆ.

ಬೆಂಗಳೂರಿನಲ್ಲಿ ಮೈಕ್ರೋಲ್ಯಾಬ್ಸ್ ಕೇಂದ್ರ ಕಚೇರಿಯಿದ್ದು, ಬೆಂಗಳೂರಿನ ಕೇಂದ್ರ ಕಚೇರಿ ಮೇಲೂ ಐಟಿ ರೇಡ್​ ಮಾಡಿದ್ಧಾರೆ. ತಮಿಳುನಾಡು, ಗೋವಾ, ಪಂಜಾಬ್, ಮುಂಬೈ ದೆಹಲಿ, ಸಿಕ್ಕಿಂ ಸೇರಿದಂತೆ ದೇಶದ 40 ಕಡೆಗಳಲ್ಲಿ ರೇಡ್​ ನಡೆದಿದೆ. ಐಟಿ ತೆರಿಗೆ ವಂಚನೆ ಮಾಹಿತಿ ಮೇಲೆ ರೇಡ್ ಮಾಡಿದ್ಧಾರೆ. ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪರಿಶೀಲನೆ ಮಾಡುತ್ತಿದ್ದಾರೆ ಬೆಳಗ್ಗೆ 7 ಗಂಟೆಯಿಂದಲೇ 25ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ಮಾಡಿ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.

- Advertisement -
spot_img

Latest News

error: Content is protected !!