Tuesday, July 1, 2025
HomeUncategorizedಬೆಳ್ತಂಗಡಿಯ ಆಭರಣ ಜ್ಯುವೆಲರಿಯಲ್ಲಿ ಐಟಿ ದಾಳಿ; ಎರಡನೇ ದಿನ ಮುಂದುವರಿದ ಪರಿಶೀಲನೆ

ಬೆಳ್ತಂಗಡಿಯ ಆಭರಣ ಜ್ಯುವೆಲರಿಯಲ್ಲಿ ಐಟಿ ದಾಳಿ; ಎರಡನೇ ದಿನ ಮುಂದುವರಿದ ಪರಿಶೀಲನೆ

spot_img
- Advertisement -
- Advertisement -

ಬೆಳ್ತಂಗಡಿ : ಐಟಿ ಅಧಿಕಾರಿಗಳು ಕರ್ನಾಟಕದಲ್ಲಿರುವ ಎಲ್ಲಾ ಆಭರಣ ಚಿನ್ನದ ಮಳಿಗೆ ಸಂಸ್ಥೆ ಮೇಲೆ ಅ.31 ರಂದು ದಾಳಿ ಮಾಡಿ ಪರಿಶೀಲನೆಯಲ್ಲಿ ತೊಡಗಿದ್ದರು. ಬೆಳ್ತಂಗಡಿಯ ಆಭರಣ ಜ್ಯುವೆಲರಿ ಮೇಲೆ ಎರಡನೇ ದಿನಕ್ಕೆ ಮುಂದುವರಿದೆ.

ಬೆಳ್ತಂಗಡಿ ನಗರದ ಸಂತೆಕಟ್ಟೆಯಲ್ಲಿರುವ ಭರಣಿ ಕಟ್ಟದಲ್ಲಿರುವ ಆಭರಣ ಚಿನ್ನದ ಮಳಿಗೆ ಮೇಲೆ ಎರಡು ಇನೋವಾ ಕಾರಿನಲ್ಲಿ ಬೆಂಗಳೂರು ಐಟಿ ಕಚೇರಿಯಿಂದ ಬಂದ ಚೈನೈ , ಆಂದ್ರಪ್ರದೇಶ, ತಮಿಳುನಾಡು, ಕೊಚ್ಚಿ ಸೇರಿದಂತೆ ಒಂಭತ್ತು ಜನ ಅಧಿಕಾರಿಗಳು ಅ.31 ರಂದು ಬೆಳಗ್ಗೆ 6 ಗಂಟೆಗೆ ದಾಳಿ ಮಾಡಿದ್ದರು. ಇದೀಗ ನ.1 ರಂದು ಎರಡನೇ ದಿನಕ್ಕೆ ದಾಳಿ ಮುಂದವರಿಸಿದ್ದಾರೆ.

ನಿನ್ನೆ ರಾತ್ರಿ ಶಾಪ್ ಗೆ ನಾಲ್ಕು ಹೊಸ ಬೆಡ್ ಐಟಿ ಅಧಿಕಾರಿಗಳು ತರಿಸಿಕೊಂಡಿದ್ದು .ಆಭರಣ ಶಾಪ್ ನಲ್ಲಿ ಇಬ್ಬರು ಐಟಿ ಅಧಿಕಾರಿಗಳು ಮತ್ತು ಇಬ್ಬರು ಆಭರಣ ಸಂಸ್ಥೆಯ ಸಿಬ್ಬಂದಿಗಳು ರಾತ್ರಿ ಉಳಿದುಕೊಂಡಿದ್ದರು.ಉಳಿದ ಐಟಿ ಅಧಿಕಾರಿಗಳು ಉಜಿರೆಯ ಖಾಸಗಿ ಲಾಡ್ಜ್ ನಲ್ಲಿ ವಾಸ್ತವ್ಯ ಮಾಡಿದ್ದರು.

- Advertisement -
spot_img

Latest News

error: Content is protected !!