Friday, May 17, 2024
Homeಕರಾವಳಿಬೆಳ್ತಂಗಡಿ : 42 ಸಿಮ್ ಕಾರ್ಡ್ ಪತ್ತೆಯಾದ ಪ್ರಕರಣ; ಧರ್ಮಸ್ಥಳ ಠಾಣೆಗೆ ಎಂಟ್ರಿಯಾದ ISD ಅಧಿಕಾರಿಗಳು

ಬೆಳ್ತಂಗಡಿ : 42 ಸಿಮ್ ಕಾರ್ಡ್ ಪತ್ತೆಯಾದ ಪ್ರಕರಣ; ಧರ್ಮಸ್ಥಳ ಠಾಣೆಗೆ ಎಂಟ್ರಿಯಾದ ISD ಅಧಿಕಾರಿಗಳು

spot_img
- Advertisement -
- Advertisement -

ಬೆಳ್ತಂಗಡಿ : ಅಕ್ರಮವಾಗಿ ಸಂಗ್ರಹಿಸುತ್ತಿದ್ದ 42 ಸಿಮ್ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಹೆಚ್ಚಿನ ಮಾಹಿತಿ ಪಡೆಯುವ ಧರ್ಮಸ್ಥಳ ಪೊಲೀಸ್ ಠಾಣೆಗೆ ಆಂತರಿಕ ಭದ್ರತಾ ಇಲಾಖೆ (ISD)ಅಧಿಕಾರಿಗಳು ಎಂಟ್ರಿಯಾಗಿ ತನಿಖೆಗೆ ಇಳಿದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ವಿಭಾಗದ ಆಂತರಿಕ ಭದ್ರತಾ ವಿಭಾಗದ (ISD) ಸಿಬ್ಬಂದಿ ಧರ್ಣಪ್ಪ ಮತ್ತು ದಿವ್ಯಾ ಧರ್ಮಸ್ಥಳ ಪೊಲೀಸ್ ಠಾಣೆಗೆ ಫೆ.5 ರಂದು ಆಗಮಿಸಿ ಪ್ರಕರಣದ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ‌.

ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ತೋಟತ್ತಾಡಿಯಲ್ಲಿ ಫೆ.1 ರಂದು ಐದು ಜನ ಯುವಕರ ತಂಡ ವಿವಿಧ ವ್ಯಕ್ತಿಗಳ ಹೆಸರಿನಲ್ಲಿ ಸಿಮ್ ಕಾರ್ಡ್ ಖರೀದಿ ಮಾಡಿ ಬೆಂಗಳೂರು ಕಡೆ ಹೋಗುವಾಗ ಧರ್ಮಸ್ಥಳ ಪೊಲೀಸರು ಧರ್ಮಸ್ಥಳ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದದಲ್ಲಿ ವಶಕ್ಕೆ ಪಡೆದು ತನಿಖೆ ನಡೆಸಿದಾಗ ಬ್ಯಾಗ್ ನಲ್ಲಿ 42 ಸಿಮ್ ಕಾರ್ಡ್ ಪತ್ತೆಯಾಗಿತ್ತು.

ಈ ಪ್ರಕರಣದಲ್ಲಿ ಆರೋಪಿಗಳಾದ ರಮೀಝ್(20), ಅಕ್ಬರ್ ಅಲಿ (24), ಮೊಹಮ್ಮದ್ ಮುಸ್ತಫಾ(22) ಮೊಹಮ್ಮದ್ ಸಾಧಿಕ್ (27) ಬಂಧಿಸಲಾಗಿತ್ತು. ಮತ್ತೋರ್ವ 17 ವರ್ಷದ ಅಪ್ರಾಪ್ತ ಬಾಲಕ ಕೂಡ ಭಾಗಿಯಾಗಿದ್ದ. ಬೆಳ್ತಂಗಡಿ ನ್ಯಾಯಾಲಯ  ನಾಲ್ಕು ಜನ ಆರೋಪಿಗಳಿಗೆ ಷರತ್ತು ಬದ್ಧ ಜಾಮೀನು ನೀಡಿದೆ.

- Advertisement -
spot_img

Latest News

error: Content is protected !!