Tuesday, June 30, 2026
Homeತಾಜಾ ಸುದ್ದಿಮುಂದಿನ ಸೀಸನ್ ಕೂಡ ಕಿಚ್ಚ ಸುದೀಪ್ ಅವರೇ ಬಿಗ್ ಬಾಸ್ ನಿರೂಪಣೆ ಮಾಡ್ತಾರಾ?

ಮುಂದಿನ ಸೀಸನ್ ಕೂಡ ಕಿಚ್ಚ ಸುದೀಪ್ ಅವರೇ ಬಿಗ್ ಬಾಸ್ ನಿರೂಪಣೆ ಮಾಡ್ತಾರಾ?

- Advertisement -
- Advertisement -

ಬೆಂಗಳೂರು: ಇನ್ಮೇಲೆ ನಾನು ಬಿಗ್ ಬಾಸ್ ಶೋ ಹೋಸ್ಟ್ ಮಾಡಲ್ಲ ಅಂತಾ ಕಿಚ್ಚ ಸುದೀಪ್ ಘೋಷಿಸಿದ್ದಾರೆ. ಸೀಸನ್ 11 ನನ್ನ ಕೊನೆಯ ಸೀಸನ್ ಅಂತಾ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಕೂಡ ಮಾಡಿದ್ದಾರೆ. ಆದರೆ ಬಿಗ್ ಬಾಸ್ ಶೋ ನಿರ್ದೇಶಕರು ಮಾತ್ರ  ಮುಂದಿನ ಸೀಸನ್ ಕೂಡ ಕಿಚ್ಚ ಸುದೀಪ್ ಅವರೇ ಮಾಡ್ತಾರೆ ಅನ್ನೋ ರೀತಿ ಮಾತನಾಡಿದ್ದಾರೆ. ಸುದೀಪ್ ಸರ್ ಇಲ್ಲದೇ ಬಿಗ್ ಬಾಸ್ ಇಲ್ಲ ಎಂದು ಎಂದಿದ್ದಾರೆ.


‘ಬಿಗ್ ಬಾಸ್’ ಶೋ ಕುರಿತಾದ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಪ್ರಕಾಶ್ ಗೋಪಾಲಕೃಷ್ಣ, ಮುಂದಿನ ಸೀಸನ್ ಅವರೇ ಇರುತ್ತಾರೆ. ಸುದೀಪ್ ಸರ್ ಇಲ್ಲದೇ ಯೋಚನೆ ಮಾಡೋಕೆ ಆಗುತ್ತಾ? ಅವರನ್ನು ಒಪ್ಪಿಸುತ್ತೇವೆ. ಈ ಹಿಂದೆ 10 ಸೀಸನ್ ಸಾಕು ಅಂತ ಹೇಳಿದ್ದರು. ಈಗ ಮುಂದಿನ ಸೀಸನ್‌ಗೂ ಅವರನ್ನೇ ಕರೆ ತರುತ್ತೇವೆ. ಸುದೀಪ್ ಅವರನ್ನು ಬಿಟ್ಟು ಬೇರೆ ಅವರನ್ನು ಆಯ್ಕೆ ಮಾಡಿಕೊಳ್ಳುದಿಲ್ಲ. ಅವರನ್ನು ಒಪ್ಪಿಸುತ್ತೇವೆ. ಕಾದು ನೋಡಿ ಸುದೀಪ್ ಸರ್ ಇಲ್ಲದೇ ಬಿಗ್ ಬಾಸ್ ಇಲ್ಲ ಎಂದು ಧೈರ್ಯವಾಗಿ ಹೇಳಿದ್ದಾರೆ.

- Advertisement -

Latest News

error: Content is protected !!