Thursday, May 16, 2024
Homeಉದ್ಯಮಇರುಟ್ಟು ಕಡೈ ಹಲ್ವಾ ಅಂಗಡಿ ಮಾಲೀಕ ಕಿಲ್ಲರ್ ಕೊರೋನಾಗೆ ಹೆದರಿ ನೇಣಿಗೆ ಶರಣು

ಇರುಟ್ಟು ಕಡೈ ಹಲ್ವಾ ಅಂಗಡಿ ಮಾಲೀಕ ಕಿಲ್ಲರ್ ಕೊರೋನಾಗೆ ಹೆದರಿ ನೇಣಿಗೆ ಶರಣು

spot_img
- Advertisement -
- Advertisement -

ತಿರುನಲ್ವೇಲಿ: ತಮಿಳುನಾಡಿನ ನೂರು ವರ್ಷಕ್ಕೂ ಹಳೆಯ, ಅತ್ಯಂತ ಜನಪ್ರಿಯ ಹಲ್ವಾ ಅಂಗಡಿ ಮಾಲೀಕ ಕೊರೊನಾವೈರಸ್ ಸೋಂಕಿಗೆ ಬಲಿಯಾಗಿದ್ದಾರೆ. ಆದರೆ, ಇರುಟ್ಟು ಕಡೈ ಹಲ್ವಾ ಅಂಗಡಿ ಮಾಲೀಕ ಸೋಂಕು ಉಲ್ಬಣವಾಗಿ ಮೃತಪಟ್ಟಿಲ್ಲ ಬದಲಿಗೆ ಕೊರೊನಾ ಭೀತಿಯಿಂದ ಆತ್ಮಹತ್ಯೆ ಮಾಡಿಕೊಂಡ ಶಂಕೆ ವ್ಯಕ್ತವಾಗಿದೆ.

ಚಿಕಿತ್ಸೆ ಗಾಗಿ ಆಸ್ಪತ್ರೆಗೆ ದಾಖಲಾಗಿದ್ದ 80 ವರ್ಷ ವಯಸ್ಸಿನ ಹರಿ ಸಿಂಗ್ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಹರಿಸಿಂಗ್ ಅವರನ್ನು ಇತ್ತೀಚೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಕೊವಿಡ್ 19 ಪಾಸಿಟಿವ್ ಇರುವುದು ಪತ್ತೆಯಾಗಿತ್ತು, ಬಹುಶಃ ಸೋಂಕಿನ ಭೀತಿಗೆ ಸಿಲುಕಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ರಾಜಸ್ಥಾನ ಮೂಲದ ಹರಿಸಿಂಗ್ ಅವರು ತಮಿಳುನಾಡಿಗೆ ವಲಸೆ ಬಂದು ಅಂಗಡಿ ಸ್ಥಾಪಿಸಿ ಜನಪ್ರಿಯತೆ ಗಳಿಸಿದರು. ಸದ್ಯ ಹರಿಸಿಂಗ್ ಅವರ ಕುಟುಂಬಸ್ಥರು ಕ್ವಾರಂಟೈನ್ ನಲ್ಲಿದ್ದಾರೆ.

- Advertisement -
spot_img

Latest News

error: Content is protected !!