ಮುಂಬೈ: ಬಿಸಿಸಿಐ ಸಂಸ್ಥೆಯು ಐಪಿಎಲ್ ಮೆಗಾ ಹರಾಜಿನ ಸಿದ್ದತೆಯ ನಡುವೆಯೇ ವನಿತಾ ಪ್ರೀಮಿಯರ್ ಲೀಗ್ ಗೂ ಸಿದ್ದತೆ ನಡೆಸುತ್ತಿದೆ. ನಂ. 7 ಗುರುವಾರದಂದು ಡಬ್ಲ್ಯೂಪಿಎಲ್ ನಲ್ಲಿ ಫ್ರಾಂಚೈಸಿಗಳು ತಾವು ಉಳಿಸಿಕೊಳ್ಳಲು ಬಯಸುವ ಆಟಗಾರರ ಅಂತಿಮ ಪಟ್ಟಿಯನ್ನು ನೀಡಲು ಕೊನೆಯ ದಿನವಾಗಿದೆ.
ಆರ್ ಸಿಬಿಯು ಈ ಬಾರಿ ಆರು ಆಟಗಾರರನ್ನು ಬಿಡುಗಡೆ ಮಾಡುತ್ತಿದೆ. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನಲ್ಲಿ ಉಳಿಸಿಕೊಳ್ಳಲು ಬಯಸುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಭಾರತೀಯ ಆಟಗಾರರಾದ ದಿಶಾ ಕಸಟ್, ಇಂದ್ರಾಣಿ ರಾಯ್, ಶ್ರದ್ಧಾ ಪೋಕರ್ಕರ್, ಸಿಮ್ರನ್ ಬಹದ್ದೂರ, ಕನ್ನಡತಿ ಶುಭಾ ಸತೀಶ್ ಮತ್ತು ದ.ಆಫ್ರಿಕಾದ ನಾದಿನ ಡಿ ಕ್ಲಾರ್ಕ್ ಅವರನ್ನು ಬಿಡುಗಡೆ ಮಾಡುತ್ತಿದೆ ಎನ್ನಲಾಗಿದೆ.
ಕೆಲವು ದಿನಗಳ ಹಿಂದೆ ಟ್ರೇಡ್ ಮೂಲಕ ಯುಪಿ ವಾರಿಯರ್ಸ್ ತಂಡದಲ್ಲಿದ್ದ ಡ್ಯಾನಿ ವ್ಯಾಟ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.
ಉಳಿಸಿಕೊಂಡ ಆಟಗಾರರು; ಸ್ಮೃತಿ ಮಂಧಾನ, ಸಬ್ಬಿನೇನಿ ಮೇಘನಾ, ರಿಚಾ ಘೋಷ್, ಜಾರ್ಜಿಯಾ ವಾರೆಹಮ್, ಶ್ರೇಯಾಂಕಾ ಪಾಟೀಲ್, ಆಶಾ ಸೋಭಾನಾ, ರೇಣುಕಾ ಸಿಂಗ್, ಸೋಫಿ ಡಿವೈನ್, ಏಕ್ತಾ ಬಿಶ್ತ್, ಕೇಟ್ ಕ್ರಾಸ್, ಕನಿಕಾ ಅಹುಜಾ ಮತ್ತು ಡ್ಯಾನಿ ವ್ಯಾಟ್.