Friday, December 6, 2024
Homeಕರಾವಳಿಕಿನ್ನಿಗೊಳಿ- ಹೊಸಕಾವೇರಿ ಮಾರ್ಗದ ಬಳಿ ಆಟೋರಿಕ್ಷಾ-ಲಾರಿ ಢಿಕ್ಕಿ; ಅಪಾಯದಿಂದ ಪ್ರಯಾಣಿಕರು ಪಾರು

ಕಿನ್ನಿಗೊಳಿ- ಹೊಸಕಾವೇರಿ ಮಾರ್ಗದ ಬಳಿ ಆಟೋರಿಕ್ಷಾ-ಲಾರಿ ಢಿಕ್ಕಿ; ಅಪಾಯದಿಂದ ಪ್ರಯಾಣಿಕರು ಪಾರು

spot_img
- Advertisement -
- Advertisement -

ಕಿನ್ನಿಗೋಳಿ: ಕೆಂಪು ಕಲ್ಲು ಹೇರಿಕೊಂಡು ಮುಚ್ಚಾರು ಕಡೆಯಿಂದ ಹೋಗುತ್ತಿದ್ದ ಲಾರಿಯೊಂದು ರಿಕ್ಷಾಕ್ಕೆ ಢಿಕ್ಕಿ ಹೊಡೆದ ಘಟನೆ ಕಿನ್ನಿಗೋಳಿ ಸಮೀಪದ ಹೊಸಕಾವೇರಿಯಲ್ಲಿ ನಡೆದಿದೆ.

ಕಲ್ಲು ಸಾಗಿಸುತ್ತಿದ್ದ ಲಾರಿಯು ಕಿನ್ನಿಗೋಳಿ ಕಡೆಯಿಂದ ಮೂಲ್ಕಿ ಕಡೆಗೆ ಸಂಚರಿಸುತ್ತಿದ್ದು, ಈ ವೇಳೆಯಲ್ಲಿ ಹೊಸಕಾವೇರಿ ಬಳಿ ಅಗಲ ಕಿರಿದಾದ ರಸ್ತೆಯಲ್ಲಿ ಮತ್ತೂಂದು ವಾಹನಕ್ಕೆ ಸೈಡ್‌ ನೀಡಲು ಮುಂದಾದಾಗ ಮುಂಭಾಗದಿಂದ ಬರುತ್ತಿದ್ದ ರಿಕ್ಷಾಕ್ಕೆ ಢಿಕ್ಕಿ ಹೊಡೆದಿದೆ. ರಿಕ್ಷಾ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ರಿಕ್ಷಾದಲ್ಲಿದ್ದ ಚಾಲಕ ಉಲ್ಲಂಜೆ ನಿವಾಸಿ ವಿಜಯ ಆಚಾರ್ಯ ಗಂಭೀರವಾಗಿ ಗಾಯಗೊಂಡಿದ್ದಾರೆ.

ಇನ್ನು ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಾದ ಕಿನ್ನಿಗೋಳಿ ಗೋಳಿಜೋರ ನಿವಾಸಿ ಅಕ್ಷಿತಾ ಹಾಗೂ ಅಶ್ಮಿತಾ ರಿಕ್ಷಾದಡಿ ಸಿಲುಕಿಕೊಂಡಿದ್ದು, ಸಾರ್ವಜನಿಕರ ಸಹಾಯದಿಂದ ಅವರನ್ನು ರಕ್ಷಣೆ ಮಾಡಲಾಯಿತು. ಅವರು ಅಲ್ಪಸ್ವಲ್ಪ ಗಾಯಗಳಿಂದ ಪಾರಾಗಿದ್ದಾರೆ.

- Advertisement -
spot_img

Latest News

error: Content is protected !!