Sunday, June 7, 2026
Homeಕರಾವಳಿಕಾಸರಗೋಡು: ಕ್ರಿಮಿನಲ್ ನಾಪಟ್ಟಾ ರಫೀಕ್ ವಿರುದ್ಧ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿ !

ಕಾಸರಗೋಡು: ಕ್ರಿಮಿನಲ್ ನಾಪಟ್ಟಾ ರಫೀಕ್ ವಿರುದ್ಧ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿ !

- Advertisement -
- Advertisement -

ಕಾಸರಗೋಡು: ದುಬೈನಲ್ಲಿ ತಲೆಮರೆಸಿಕೊಂಡಿರುವ ತಾಲೂಕಿನ ಪೈವಳಿಕೆ ಅಟ್ಟೆಗೋಳಿ ನಿವಾಸಿ ನಾಪಟ್ಟ ರಫೀಕ್ (32) ಎಂಬಾತನ ವಿರುದ್ಧ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದೆ.

ರಫೀಕ್ ರೌಡಿ ಶೀಟರ್ ಯೂಸುಫ್ ಜಿಯಾ ಸಹಚರನಾಗಿದ್ದು, ಕಳಿಯ ರಫೀಕ್ ಹತ್ಯೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ನಗರ ಪೊಲೀಸರ ಕೋರಿಕೆಯ ಮೇರೆಗೆ ಇಂಟರ್‌ಪೋಲ್ ಈ ಸೂಚನೆಯನ್ನು ಹೊರತಂದಿದೆ.

ರಫೀಕ್ ಕೇರಳ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಹಲವಾರು ಕೊಲೆ, ಅಪಹರಣ, ಡಕಾಯಿತಿ ಮತ್ತು ಲೂಟಿ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ.

- Advertisement -

Latest News

error: Content is protected !!