Thursday, June 4, 2026
Homeಕರಾವಳಿಉಡುಪಿಸಮಸ್ಯೆ ಪರಿಹರಿಸಲು ಬಿಜೆಪಿಯಲ್ಲಿ ಆಂತರಿಕ ವ್ಯವಸ್ಥೆ ಇದೆ: ಉಡುಪಿಯಲ್ಲಿ ಸಚಿವ ಸುನೀಲ್ ಕುಮಾರ್

ಸಮಸ್ಯೆ ಪರಿಹರಿಸಲು ಬಿಜೆಪಿಯಲ್ಲಿ ಆಂತರಿಕ ವ್ಯವಸ್ಥೆ ಇದೆ: ಉಡುಪಿಯಲ್ಲಿ ಸಚಿವ ಸುನೀಲ್ ಕುಮಾರ್

- Advertisement -
- Advertisement -

ಉಡುಪಿ: ಖಾತೆ ಹಂಚಿಕೆಯಲ್ಲಿ ಇಬ್ಬರು ಸಚಿವರಿಗೆ ಅಸಮಾಧಾನವಾಗಿರುವ ವಿಚಾರದಲ್ಲಿ ಬೇಸರಗೊಂಡ ಸಚಿವರನ್ನು ಸಿಎಂ ಕರೆದು ಮಾತನಾಡುತ್ತಾರೆ ಎಂದು ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ. ‌

ಉಡುಪಿಯಲ್ಲಿ ಇಂದು ಮಾತನಾಡಿದ ಸುನೀಲ್ ಕುಮಾರ್, ಸಮಸ್ಯೆ ಬಗೆಹರಿಸಲು ಬಿಜೆಪಿಯಲ್ಲಿ ಆಂತರಿಕ ವ್ಯವಸ್ಥೆ ಇದೆ ಎಂದು ತಿಳಿಸಿದ್ದಾರೆ. ‌ಬೇಸರ ಮತ್ತು ನೋವನ್ನು ಆಂತರಿಕವಾಗಿ ಕರೆದು ಮಾತನಾಡಲಾಗುತ್ತದೆ, ಬಿಜೆಪಿ ತನ್ನ ವ್ಯವಸ್ಥೆಯ ಒಳಗೆ ಅದನ್ನ ಸರಿ ಮಾಡುತ್ತದೆ ಎಂದೂ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.

ಇದೇ ವೇಳೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ವಿಚಾರವಾಗಿ
ತಗಾದೆ ತೆಗೆದು ವಿರೋಧಿಸಿದ್ದ ಹಾಸನ ಶಾಸಕ ಪ್ರೀತಂ ಗೌಡ ವಿಚಾರದಲ್ಲಿ ಪ್ರತಿಕ್ರಿಯಿಸಿರುವ ಸುನಿಲ್ ಕುಮಾರ್,
ಯಾರ ಜೊತೆಗೂ ಕೂಡಾ ಫ್ರೆಂಡ್ ಶಿಪ್ ಇರಬಹುದು, ಆದರೆ
ಬದ್ಧತೆ ಮತ್ತು ಕಾರ್ಯಶೈಲಿಯಲ್ಲಿ ವ್ಯತ್ಯಾಸಗಳು ಆಗಬಾರದು ಎಂದಿದ್ದಾರೆ.

- Advertisement -

Latest News

error: Content is protected !!