Wednesday, June 24, 2026
Homeಕರಾವಳಿಉಡುಪಿಮಂಗಳೂರು : ನಕ್ಸಲ್ ನಾಯಕ ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ನಕ್ಸಲ್ ಪೀಡಿತ ಪ್ರದೇಶಗಳಿಗೆ ಪ್ರವೇಶಿಸದಂತೆ...

ಮಂಗಳೂರು : ನಕ್ಸಲ್ ನಾಯಕ ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ನಕ್ಸಲ್ ಪೀಡಿತ ಪ್ರದೇಶಗಳಿಗೆ ಪ್ರವೇಶಿಸದಂತೆ ಗುಪ್ತಚರ ಇಲಾಖೆಯಿಂದ ಪೊಲೀಸರಿಗೆ ಸೂಚನೆ

- Advertisement -
- Advertisement -

ಮಂಗಳೂರು : ಮೋಸ್ಟ್ ವಾಟೆಂಡ್ ನಕ್ಸಲ್ ನಾಯಕ ವಿಕ್ರಂ ಗೌಡ ಎನ್ ಕೌಂಟರ್ ಬಳಿಕ ದಕ್ಷಿಣ ಕನ್ನಡ, ಉಡುಪಿ , ಚಿಕ್ಕಮಗಳೂರು ನಕ್ಸಲ್ ಪೀಡತ ಪ್ರದೇಶಗಳಿಗೆ ಎ.ಎನ್.ಎಫ್ ಸಿಬ್ಬಂದಿ ಬಿಟ್ಟು ಪೊಲೀಸ್ ಇಲಾಖೆಯ ಯಾರು ಕೂಡ ಎಂಟ್ರಿಯಾಗದಂತೆ ರಾಜ್ಯದ ಗುಪ್ತಚರ ಇಲಾಖೆಯ ಹಿರಿಯ ಅಧಿಕಾರಿಗಳು ಮೌಖಿಕ ಅದೇಶ ಮಾಡಿದ್ದಾರೆ ಎನ್ನಲಾಗಿದೆ.

ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ನಾಡ್ಪಾಲ್ ಗ್ರಾಮದ ಪೀತ ಬೈಲ್ ಬಳಿ ನ.18 ರಂದು  ನಡೆದ ನಕ್ಸಲ್ ನಾಯಕ ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣದ ಬಳಿಕ ಉಳಿದ ನಕ್ಸಲರು ಪೊಲೀಸರ ಮೇಲೆ ಪ್ರತಿದಾಳಿ(ರಿವೆಂಜ್) ನಡೆಸುವ ಸಾಧ್ಯತೆ ಇರುವ ಕಾರಣ ಪೊಲೀಸ್ ಇಲಾಖೆಗೆ ನಕ್ಸಲ್ ಪೀಡಿತ ಪ್ರದೇಶಗಳಿಗೆ ಪ್ರವೇಶ ಮಾಡದಂತೆ ಮೌಖಿಕವಾಗಿ ಎಚ್ಚರಿಕೆ ನೀಡಿದೆ.

ಕಾಡಿನಲ್ಲಿ ಪರಾರಿಯಾಗಿರುವ ನಕ್ಸಲರಾದ ಮುಂಡಗಾರು ಲತಾ, ಕುತ್ಲೂರಿನ ಸುಂದರಿ, ಜಾನ್@ಜಯಣ್ಣ ಸೇರಿದಂತೆ ಕೆಲ ನಕ್ಸಲ್ ಇನ್ನೂ ಕಾಡಿನಲ್ಲಿರುವ ಸಾಧ್ಯತೆ ಇದ್ದು ಇವರ ಬಳಿ ಬಂದೂಕು ಇದ್ದು. ಇವರು ವಿಕ್ರಂ ಗೌಡ ಎನ್ಕೌಂಟರ್ ಗೆ ಪೊಲೀಸರ ಮೇಲೆ ರಿವೆಂಜ್ ಪಡೆದುಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿರುವ ಕಾರಣದಿಂದ ಎ.ಎನ್.ಎಫ್ ಸಿಬ್ಬಂದಿ ಬಿಟ್ಟು ಬೇರೆ ಯಾರು ಕೂಡ ನಕ್ಸಲ್ ಪೀಡಿತ ಪ್ರದೇಶದ ವ್ಯಾಪ್ತಿಯ ಪೊಲೀಸರಿಗೆ ಹಾಗೂ ಗುಪ್ತಚರ ಇಲಾಖೆಯ ಸಿಬ್ಬಂದಿಗೆ ರಾಜ್ಯದ ಗುಪ್ತಚರ ಇಲಾಖೆಯ ಹಿರಿಯ ಅಧಿಕಾರಿಗಳು ಮೌಖಿಕ ಆದೇಶ ಮಾಡಿದ್ದಾರೆ.

- Advertisement -

Latest News

error: Content is protected !!