Sunday, May 5, 2024
Homeಕೊಡಗುಬುರ್ಖಾ, ಹಿಜಾಬ್ ಹೋಲುವ ಬಟ್ಟೆ ಧರಿಸಿ ನೃತ್ಯ: ಗ್ರಾಮಾಭಿವೃದ್ಧಿ ಸಮಿತಿ ಸಮಾರಂಭದಲ್ಲಿ ಧಾರ್ಮಿಕ ಉಡುಪಿಗೆ ಅವಮಾನ...

ಬುರ್ಖಾ, ಹಿಜಾಬ್ ಹೋಲುವ ಬಟ್ಟೆ ಧರಿಸಿ ನೃತ್ಯ: ಗ್ರಾಮಾಭಿವೃದ್ಧಿ ಸಮಿತಿ ಸಮಾರಂಭದಲ್ಲಿ ಧಾರ್ಮಿಕ ಉಡುಪಿಗೆ ಅವಮಾನ ಆರೋಪ

spot_img
- Advertisement -
- Advertisement -

ಕೊಡಗು : ಬುರ್ಖಾ ಹಾಗೂ ಹಿಜಾಬ್ ಹೋಲುವ ಬಟ್ಟೆ ಧರಿಸಿ ಕೊಡವ ವಾಲಗಕ್ಕೆ ಯುವಕರು ನೃತ್ಯ ಮಾಡಿ ಧಾರ್ಮಿಕ ಉಡುಪಿಗೆ ಅವಮಾನ ಎಸಗಿದ ಆರೋಪ ಕೇಳಿ ಬಂದಿದೆ. ಕೊಡಗಿನ ಮಡಿಕೇರಿ ತಾಲೂಕಿನ ವೆಸ್ಟ್ ಕೊಳಕೇರಿ ಗ್ರಾಮದಲ್ಲಿ ನಿನ್ನೆ ನಡೆದ ಗ್ರಾಮಾಭಿವೃದ್ಧಿ ಸಮಿತಿ ಸಮಾರಂಭದಲ್ಲಿ ಈ ರೀತಿ ನೃತ್ಯ ಮಾಡಲಾಗಿದೆ ಎನ್ನಲಾಗಿದೆ.

ಸದ್ಯ ಈ ನೃತ್ಯದ ವಿಡಿಯೋ ಸಾಮಾಜಿಕ‌ ಜಾಲತಾಣದಲ್ಲಿ ವೈರಲ್ ಆಗಿದ್ದು ಚರ್ಚೆಗೆ ಗ್ರಾಸವಾಗಿದೆ. ಧಾರ್ಮಿಕ ಉಡುಪಿನ ಅಣಕಿಸುವಿಕೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೇ ಪೊಲೀಸ್ ದೂರು ನೀಡುವ ಬಗ್ಗೆ ಮುಸ್ಲಿಂ ಸಂಘಟನೆಗಳು ಚಿಂತನೆ ನಡೆಸಿವೆ. ಇನ್ನು ಫ್ಯಾನ್ಸಿ ಡ್ರೆಸ್ ಆಯೋಜಿಸಿದ್ದಾಗಿ ಗ್ರಾಮಾಭಿವೃದ್ಧಿ ಸಮಿತಿ ಸ್ಪಷ್ಟನೆ ನೀಡಿದೆ

- Advertisement -
spot_img

Latest News

error: Content is protected !!