Thursday, May 2, 2024
Homeತಾಜಾ ಸುದ್ದಿಭದ್ರತೆ ವಾಪಾಸ್‌ ಪಡೆದ 24 ಗಂಟೆಯಲ್ಲೇ ಹತ್ಯೆ: ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಪಂಬಾಬಿ ಗಾಯಕ ಸಿಧು...

ಭದ್ರತೆ ವಾಪಾಸ್‌ ಪಡೆದ 24 ಗಂಟೆಯಲ್ಲೇ ಹತ್ಯೆ: ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಪಂಬಾಬಿ ಗಾಯಕ ಸಿಧು ಮೂಸೆವಾಲ

spot_img
- Advertisement -
- Advertisement -

ಪಂಜಾಬ್: ಪಂಜಾಬಿನಲ್ಲಿ ಭದ್ರತೆಯನ್ನು ವಾಪಸ್ ಪಡೆದ 24 ಗಂಟೆಯಲ್ಲೇ ಪಂಜಾಬಿ ಗಾಯಕ ಸಿಧು ಮೂಸೆವಾಲ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಿನ್ನೆ ಮಾನ್ಸಾ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಸಿಧು ಮೂಸೆವಾಲ ಜೊತೆಗಿದ್ದ ಇಬ್ಬರೂ ಗಾಯಗೊಂಡಿದ್ದಾರೆ.

ನಿನ್ನೆ ಮಾನ್ಸಾ ಜಿಲ್ಲೆಯ ತಮ್ಮ ಹಳ್ಳಿಗೆ ವಾಹನದಲ್ಲಿ ಹೋಗುವಾಗ ಶೂಟೌಟ್‌ ನಡೆದಿದೆ. ಶೂಟೌಟ್‌ ನಂತರ ತೀವ್ರ  ರಕ್ತಸ್ರಾವದಿಂದ ಸಿಧು ಮೂಸೆವಾಲಾ ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ಸೇರಿಸಲಾಯ್ತಾದ್ರೂ ವೈದ್ಯರು ಸಿಧು ಸಾವನ್ನಪ್ಪಿದ್ದಾರೆ ಎಂದು ಧೃಡಪಡಿಸಿದ್ರು..

ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ಪಂಜಾಬಿ ಗಾಯಕ ಸಿಧು ಮೂಸೆವಾಲಾ ಸೇರಿದಂತೆ 424 ಜನರ ಭದ್ರತೆಯನ್ನು ಪಂಜಾಬ್ ಪೊಲೀಸರು ಹಿಂತೆಗೆದುಕೊಂಡ ಒಂದು ದಿನದಲ್ಲಿ ಈ ಘಟನೆ ನಡೆದಿದೆ. ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಗಾಯಕ ಸಿಧು ಮೂಸೆವಾಲಾ ಮಾನಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಎಎಪಿ ಅಭ್ಯರ್ಥಿ ವಿಜಯ್ ಸಿಂಗ್ಲಾ ವಿರುದ್ಧ 63,000 ಮತಗಳ ಭಾರೀ ಅಂತರದಿಂದ ಸೋಲು ಅನುಭವಿಸಿದ್ದರು.

- Advertisement -
spot_img

Latest News

error: Content is protected !!