Sunday, June 29, 2025
Homeಕರಾವಳಿಪಠ್ಯದಿಂದ ಕಯ್ಯಾರ ಕಿಂಞಣ್ಣ ರೈ ಹೆಸರು ತೆಗೆದು ಬಂಟ ಸಮುದಾಯಕ್ಕೆ ಅವಮಾನ; ಇದನ್ನು ಸರಿಪಡಿಸದಿದ್ದರೆ ಅದರ...

ಪಠ್ಯದಿಂದ ಕಯ್ಯಾರ ಕಿಂಞಣ್ಣ ರೈ ಹೆಸರು ತೆಗೆದು ಬಂಟ ಸಮುದಾಯಕ್ಕೆ ಅವಮಾನ; ಇದನ್ನು ಸರಿಪಡಿಸದಿದ್ದರೆ ಅದರ ಬೆಲೆ ತೆರಬೇಕಾಗಬಹುದು ಎಂದು ಎಚ್ಚರಿಕೆ ನೀಡಿದ ಅಜಿತ್ ಕುಮಾರ್ ರೈ

spot_img
- Advertisement -
- Advertisement -

ಮಂಗಳೂರು: ರಾಜ್ಯ ಸರಕಾರ ಸ್ವಾತಂತ್ರ್ಯ ಹೋರಾಟಗಾರ ಕಯ್ಯಾರ ಕಿಂಞಣ್ಣ ರೈ ಅವರ ಹೆಸರನ್ನು ಪಠ್ಯ ಪುಸ್ತಕ ಪರಿಷ್ಕರಣೆ ನೆಪದಲ್ಲಿ ಪಠ್ಯ ಪುಸ್ತಕದಿಂದ ತೆಗೆದು ಹಾಕಿದ್ದು ಇಡೀ ಬಂಟ ಸಮುದಾಯಕ್ಕೆ ಅವಮಾನ ಮಾಡಿದೆ. ನಾಡು, ನುಡಿಗಾಗಿ ಶ್ರಮಿಸಿದ ಕಯ್ಯಾರ ಅವರನ್ನು ಪಠ್ಯದಿಂದ ತಳೆದು ಹಾಕಿ ಬಂಟ ಸಮಾಜಕ್ಕೆ ನೋವುಂಟು ಮಾಡಿದೆ. ಇದನ್ನು ಸರಿಪಡಿಸದಿದ್ದರೆ ಅದರ ಬೆಲೆ ತೆರಬೇಕಾಗಬಹುದು ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಎಚ್ಚರಿಸಿದ್ದಾರೆ.

ಅವರು ನಗರದ ಬಂಟ್ಸ್ ಹಾಸ್ಟೆಲಿನ ಸಂಘದ ಅಮೃತೋತ್ಸವ ಕಟ್ಟಡದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ಕಯ್ಯಾರ ಅವರು ಕಾಸರಗೋಡು ಜಿಲ್ಲೆ ಕರ್ನಾಟಕ ಸೇರಬೇಕೆಂದು ತಮ್ಮ ಜೀವಿತದ ಕಡೆ ವರೆಗೂ ಧ್ವನಿ ಎತ್ತಿದವರು. ಅವರು ಈ ನಾಡಿಗೆ ನೀಡಿರುವ ಕೊಡುಗೆಯನ್ನು ನಾವು ಮರೆಯಬಾರದು ಎಂದರು. ಕರ್ನಾಟಕ ಏಕೀಕರಣ ಪ್ರಶಸ್ತಿ ಶ್ರೇಷ್ಠ ಅಧ್ಯಾಪಕ ಪ್ರಶಸ್ತಿ ಮಂಗಳೂರು ವಿವಿಯ ಗೌರವ ಡಾಕ್ಟರೇಟ್, ಹಂಪಿ ವಿವಿಯ ನಾಡೋಟ ಪ್ರಶಸ್ತಿ ಪಡೆದು ವೇದವನ್ನೇ ಕನ್ನಡಕ್ಕೆ ಭಾಷಾಂತರ ಮಾಡಿದ ವ್ಯಕ್ತಿಯ 7ನೇ ತರಗತಿಯ ಸಮಾಜ ವಿಜ್ಞಾನ ಪುಸ್ತಕದಲ್ಲಿದ್ದ ಕರ್ನಾಟಕ ಏಕೀಕರಣ ಹಾಗೂ ಗಡಿ ವಿವಾದಗಳು ಎನ್ನುವ ಪಠ್ಯದಲ್ಲಿ ಕಯ್ಯಾರ ಕಿಂಞಣ್ಣ ರೈ ಹೆಸರನ್ನೇ ತೆಗೆದು ಬಿಟ್ಟಿದ್ದಾರೆ ಎಂದು ಅಕ್ರೋಶ ವ್ಯಕ್ತಪಡಿಸಿದರು.

ಇನ್ನೂ ತಮ್ಮ101ನೇ ವಯಸ್ಸಿನಲ್ಲೂ ಕಾಸರಗೋಡು ಕರ್ನಾಟಕ ಸೇರಬೇಕೆಂದು ಹಕ್ಕೊತ್ತಾಯ ಮಂಡಿಸಿದ ಕಯ್ಯಾರ ಕಿಂಞಣ್ಣ ರೈ ಅವರ ಹೆಸರನ್ನು ಪಠ್ಯದಿಂದ ತೆಗೆದು ಹಾಕಿದ್ದು ಯಾಕೆ? ಆಮೂಲಕ ಯಾವ ರೀತಿಯ ಸಂದೇಶವನ್ನು ಪಠ್ಯ ಪುಸ್ತಕ ಸಮಿತಿ ಕೊಟ್ಟಿದ್ದಾರೆ. ಈ ಬಗ್ಗೆ ರಾಜ್ಯ ಸರಕಾರ ಕೂಡಲೇ ಸರಿಪಡಿಸುವ ಕೆಲಸ ಮಾಡಬೇಕು. ಇಲ್ಲದಿದ್ದರೆ, ದೇಶ- ವಿದೇಶದಲ್ಲಿ ಬಂಟ ಸಮುದಾಯ ಧ್ವನಿ ಎತ್ತಲಿದೆ. ಇಡೀ ಜಗತ್ತಿನಲ್ಲಿ ಬಂಟರಿದ್ದಾರೆ. ಬಂಟ ಸಮಾಜಕ್ಕೆ ನೋವಾಗಿದೆ. ಅದನ್ನು ಸಮುದಾಯದ ಜನರು ತೋರಿಸಲಿದ್ದಾರೆ ಎಂದು ಅಜಿತ್ ಕುಮಾರ್ ರೈ ಹೇಳಿದರು.

- Advertisement -
spot_img

Latest News

error: Content is protected !!