Thursday, May 16, 2024
Homeತಾಜಾ ಸುದ್ದಿಫಾಸ್ಟ್‌ ಟ್ಯಾಗ್‌ ಬದಲು ಸದ್ಯದಲ್ಲೇ ಮತ್ತೊಂದು ವ್ಯವಸ್ಥೆ ಜಾರಿಗೆ ಸರ್ಕಾರ ಚಿಂತನೆ: ಗಾಡಿ ಓಡಿದಷ್ಟೂ ದೂರಕ್ಕೆ...

ಫಾಸ್ಟ್‌ ಟ್ಯಾಗ್‌ ಬದಲು ಸದ್ಯದಲ್ಲೇ ಮತ್ತೊಂದು ವ್ಯವಸ್ಥೆ ಜಾರಿಗೆ ಸರ್ಕಾರ ಚಿಂತನೆ: ಗಾಡಿ ಓಡಿದಷ್ಟೂ ದೂರಕ್ಕೆ ಟೋಲ್ ಸಂಗ್ರಹ

spot_img
- Advertisement -
- Advertisement -

ಬೆಂಗಳೂರು: ಸದ್ಯದಲ್ಲೇ ಫಾಸ್ಟ್‌ ಟ್ಯಾಗ್‌ ಬದಲು ಹೊಸ ವ್ಯವಸ್ಥೆಯನ್ನು ಜಾರಿಗೆ  ತರಲು ಸರ್ಕಾರ ಚಿಂತನೆ ನಡೆಸಿದೆ. ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಹೆದ್ದಾರಿಗಳಲ್ಲಿ ವಾಹನ ಸಂಚರಿಸಿದಷ್ಟು ದೂರವನ್ನು ಲೆಕ್ಕ ಹಾಕಿ ಟೋಲ್ ನಿಗದಿಪಡಿಸುವ ವ್ಯವಸ್ಥೆಯನ್ನು ಜಾರಿಗೆ ತರುವ ಸಾಧ್ಯತೆ ಇದೆ.  ಜಿಪಿಎಸ್ ಉಪಗ್ರಹ ತಂತ್ರಜ್ಞಾನವನ್ನು ಟೋಲ್ ನಿಗದಿಪಡಿಸಲು ಬಳಸಿಕೊಳ್ಳಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಇದರ ಕಾರ್ಯಸಾಧ್ಯತೆ ಪರಿಶೀಲಿಸಲು ಪ್ರಾಯೋಗಿಕವಾಗಿ ಭಾರತದಲ್ಲಿ ಹೊಸ ವ್ಯವಸ್ಥೆಯನ್ನು ಕೆಲವೆಡೆ ಜಾರಿಗೆ ತರಲಾಗಿದೆ..

ಒಂದು ಹೆದ್ದಾರಿಯಲ್ಲಿ ವಾಹನವು ಎಷ್ಟು ದೂರ ಸಂಚರಿಸಿದೆ ಎನ್ನುವುದನ್ನು ಲೆಕ್ಕ ಹಾಕಿ ಎಷ್ಟು ಟೋಲ್ ಪಾವತಿಸಬೇಕು ಎನ್ನುವುದನ್ನು ನಿಗದಿಪಡಿಸಲಾಗುತ್ತದೆ. ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಕಳೆದ ಮಾರ್ಚ್​ನಲ್ಲಿ ಲೋಕಸಭೆಯಲ್ಲಿ ಮಾತನಾಡುವಾಗ ಇನ್ನೊಂದು ವರ್ಷದಲ್ಲಿ ದೇಶಾದ್ಯಂತ ಟೋಲ್​ಪ್ಲಾಜಾ ತೆಗೆದುಹಾಕಲಾಗುವುದು ಎಂದು ಹೇಳಿದ್ದರು.

- Advertisement -
spot_img

Latest News

error: Content is protected !!