Wednesday, June 24, 2026
Homeಅಪರಾಧಮಂಗಳೂರು ಸೇರಿದಂತೆ ರಾಜ್ಯದ ಕಾರಾಗೃಹಗಳಲ್ಲಿ ತಪಾಸಣೆ: ಕೈದಿಗಳ ಬಳಿ ಮಾರಕಾಸ್ತ್ರಗಳು ಪತ್ತೆ

ಮಂಗಳೂರು ಸೇರಿದಂತೆ ರಾಜ್ಯದ ಕಾರಾಗೃಹಗಳಲ್ಲಿ ತಪಾಸಣೆ: ಕೈದಿಗಳ ಬಳಿ ಮಾರಕಾಸ್ತ್ರಗಳು ಪತ್ತೆ

- Advertisement -
- Advertisement -

ಕಾರಾಗೃಹ ಹಾಗೂ ಸುಧಾರಣಾ ಇಲಾಖೆಯ ಡಿಜಿಪಿಯಾಗಿ ಹಿರಿಯ ಐಪಿಎಸ್‌ ಅಧಿಕಾರಿ ಅಲೋಕ್‌ ಕುಮಾರ್‌ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ರಾಜ್ಯದ ಜೈಲುಗಳಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ತಪಾಸಣೆ ನಡೆಸಲಾಯಿತು.

ಮಂಗಳೂರು, ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದಂತೆ ಮೈಸೂರು, ವಿಜಯಪುರ, ಬೆಳಗಾವಿ ಜಿಲ್ಲಾ ಕಾರಾಗೃಹಗಳಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ಕೈದಿಗಳ ಬಳಿ ಮೊಬೈಲ್‌ಗಳು, ಚಾಕು, ಮಾದಕ ಪದಾರ್ಥಗಳು ಪತ್ತೆಯಾಗಿವೆ.

ಮಂಗಳೂರಿನಲ್ಲಿ 4 ಫೋನ್‌ಗಳು, ಪರಪ್ಪನ ಅಗ್ರಹಾರದಲ್ಲಿ 6 ಮೊಬೈಲ್‌ ಹಾಗೂ 4 ಚಾಕುಗಳು, ಮೈಸೂರಿನಲ್ಲಿ 9 ಫೋನ್‌ಗಳು ಹಾಗೂ 11 ಸಿಮ್‌ ಕಾರ್ಡ್‌ಗಳು, ಬೆಳಗಾವಿಯಲ್ಲಿ 4 ಫೋನ್‌ಗಳು ಹಾಗೂ ಹೊರಗೆ ಎಸೆಯಲ್ಪಟ್ಟಿದ್ದ 366 ಗ್ರಾಂ ಗಾಂಜಾ, ವಿಜಯಪುರದಲ್ಲಿ 1 ಫೋನ್‌ ಪತ್ತೆಯಾಗಿವೆ.

- Advertisement -

Latest News

error: Content is protected !!