Saturday, May 18, 2024
Homeಕರಾವಳಿಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ತಯಾರಿ ಬಗ್ಗೆ ಮಾಹಿತಿ ಕಾರ್ಯಾಗಾರ- ಗ್ರಾಮೀಣ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ವೇದಿಕೆ...

ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ತಯಾರಿ ಬಗ್ಗೆ ಮಾಹಿತಿ ಕಾರ್ಯಾಗಾರ- ಗ್ರಾಮೀಣ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ವೇದಿಕೆ ಒಡಗಿಸುತ್ತಿದೆ ವಿದ್ಯಾಮಾತ ಫೌಂಡೇಶನ್

spot_img
- Advertisement -
- Advertisement -

ಪುತ್ತೂರು: ಸರಕಾರಿ ಉದ್ಯೋಗ ಪಡೆಯುವುದು ಬಹುತೇಕ ಯುವ ಸಮುದಾಯದ ಕನಸು. ಆದರೆ ಸೂಕ್ತ ಮಾರ್ಗದರ್ಶನ ,ಪ್ರೋತ್ಸಾಹದ ಕೊರತೆಯಿಂದ ಬಹಳಷ್ಟು ಜನ ಅವಕಾಶ ವಂಚಿತರಾಗುತ್ತಿರುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದ ಶಿಕ್ಷಣ ಮತ್ತು ಉದ್ಯೋಗದ ಬಗ್ಗೆ ಒಂದಷ್ಟು ಸಮಾಜಮುಖಿ ಕಾರ್ಯಕ್ರಮಗಳಿಂದ ಗುರುತಿಸಿಕೊಂಡಿರುವ ವಿದ್ಯಾಮಾತ ಫೌಂಡೇಶನ್ ಪುತ್ತೂರಿನಲ್ಲಿ ಸರಕಾರಿ ಉದ್ಯೋಗಗಳನ್ನು ಪಡೆಯಲು ಎದುರಿಸಬೇಕಾಗಿರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವ ತಯಾರಿ ಬಗ್ಗೆ ಒಂದು ದಿನದ ಕಾರ್ಯಗಾರವನ್ನು ಹಮ್ಮಿಕೊಳ್ಳಲು ಯೋಜನೆ ರೂಪಿಸಿದೆ.

ಈ ಕಾರ್ಯಾಗಾರದಲ್ಲಿ ಪ್ರಾಥಮಿಕ ಹಂತದ ಹುದ್ದೆಗಳಿಂದ ಹಿಡಿದು ಕೆಪಿಎಸ್ಸಿ, ಯುಪಿಎಸ್ಸಿ ವರೆಗಿನ ಎಲ್ಲಾ ರೀತಿಯ ಪರೀಕ್ಷೆಗಳು ಯಾವ ರೀತಿಯಲ್ಲಿ ಇರುತ್ತವೆ ಮತ್ತು ಪೂರ್ವ ತಯಾರಿ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗುತ್ತದೆ.

ಆಸಕ್ತರು ಗೂಗಲ್ ಫಾರ್ಮ್ ಮೂಲಕ ಈ ಕೆಳಗೆ ನೀಡಿರುವ ಲಿಂಕ್ ಬಳಸಿ ವಿವರವನ್ನು ದಾಖಲಿಸಿ. ಹೆಸರು ನೋಂದಾಯಿಸಿಕೊಂಡವರಿಗೆ ಕಾರ್ಯಗಾರದ ದಿನಾಂಕ ಇತ್ಯಾದಿ ಮಾಹಿತಿಯನ್ನು ನೀಡಲಾಗುತ್ತದೆ. (ಕೋವಿಡ್-19 ನಿಯಮಾವಳಿಗಳನ್ನು ಪಾಲಿಸುವುದು ಕಡ್ಡಾಯವಾಗಿದೆ) ತಮ್ಮ ಹೆಸರನ್ನು ಈ ಕೆಳಗಿನ ಲಿಂಕ್ ತೆರೆದು ನೋಂದಾಯಿಸಿ ಮತ್ತು ಉಚಿತ ಕಾರ್ಯಾಗಾರದ ಪ್ರಯೋಜನ ಪಡೆದುಕೊಳ್ಳಬಹುದು.

ಪುತ್ತೂರಿನಲ್ಲಿ ನಡೆಯುವ ಈ ಕಾರ್ಯಾಗಾರದ ಬಗ್ಗೆ ದಿನಾಂಕ ಮತ್ತು ಸ್ಥಳವನ್ನು ಹೆಸರು ನೋಂದಾಯಿಸಿದವರಿಗೆ ಕರೆ ಮಾಡಿ ತಿಳಿಸಲಾಗುವುದು.ಪ್ರಸಕ್ತ ಸಾಲಿನಲ್ಲಿ ಪಿಯುಸಿ,ಪದವಿ,ಸ್ನಾತಕೋತ್ತರ ಪದವಿ ಓದುತ್ತಿರುವ ಅಥವಾ ಓದು ಮುಗಿಸಿರುವವರು ಪಾಲ್ಗೊಳ್ಳಲು ಅವಕಾಶವಿದೆ.

ವಿದ್ಯಾಮಾತ ಪುತ್ತೂರು ಕಚೇರಿಯಲ್ಲಿ ಕೂಡ ನೇರವಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಆರ್ಜಿ ಸಲ್ಲಿಸಲು ಕೊನೆಯ ದಿನಾಂಕ 17-11-2020 . ಈ ಕೆಳಗಿನ ಲಿಂಕ್ ಮೂಲಕ ಅರ್ಜಿ ಸಲ್ಲಿಸಿದ ತಕ್ಷಣ SMS ಮೂಲಕ ಅರ್ಜಿ ಸ್ವೀಕೃತಿಯನ್ನು ಖಚಿತ ಪಡಿಸಲಾಗುವುದು. https://rb.gy/j92psd ಹೆಚ್ಚಿನ ಮಾಹಿತಿಗಾಗಿ:9148935808/8590773486 ಗೆ (ಬೆಳಿಗ್ಗೆ 10.30 ರಿಂದ ಸಾಯಂಕಾಲ 04ರ ವರೆಗೆ ಕರೆ ಮಾಡಿ)

- Advertisement -
spot_img

Latest News

error: Content is protected !!