Thursday, June 4, 2026
Homeತಾಜಾ ಸುದ್ದಿಪ್ಯಾಂಟ್ ಬಿಚ್ಚಿ ಅಸಭ್ಯ ವರ್ತನೆ: ಯುವಕನಿಗೆ ಚೆನ್ನಾಗಿ ಬುದ್ಧಿ ಕಲಿಸಿದ ಯುವತಿ

ಪ್ಯಾಂಟ್ ಬಿಚ್ಚಿ ಅಸಭ್ಯ ವರ್ತನೆ: ಯುವಕನಿಗೆ ಚೆನ್ನಾಗಿ ಬುದ್ಧಿ ಕಲಿಸಿದ ಯುವತಿ

- Advertisement -
- Advertisement -

ಬೆಂಗಳೂರು: ತನ್ನ ಮನೆಯ ಟೆರೇಸ್ ಮೇಲೆ ನಿಂತು ಯುವತಿಯ ಎದುರು ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದ ಯುವಕನೊಬ್ಬನಿಗೆ ಯುವತಿಯೊಬ್ಬರು ಚೆನ್ನಾಗಿ ಪಾಠ ಕಲಿಸಿದ್ದಾರೆ.

ಹೌದು.. ತನ್ನ ಮುಂದೆ ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದಾತನ ವಿರುದ್ಧ ದಿಟ್ಟತನದಿಂದ ದೂರು ನೀಡಿದ್ದಾಳೆ. ಬೆಂಗಳೂರಿನ ಕೋರಮಂಗಲ ನಿವಾಸಿಯಾಗಿರುವ ನೂಪುರ್ ಸರಸ್ವತ್ ಅವರು ನವೆಂಬರ್ 8 ರಂದು ಸಾಮಾಜಿಕ ಜಾಲತಾಣ ಇನ್‍ಸ್ಟಾದಲ್ಲಿ ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಯುವಕನ ವಿರುದ್ಧ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದರು. ಆದರೆ ಪ್ರಯೋಜನವಾಗಿರಲಿಲ್ಲ. ಹಾಗಾಗಿ ಆಕೆಯೇ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

ನೂಪುರ್ ದಿಟ್ಟ ತನವನ್ನು ತಿಳಿದ ಸ್ಥಳೀಯ ನಿವಾಸಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ನೂಪುರ್ ಬಿಲ್ಡಿಂಗ್‍ನ ನಿವಾಸಿಯಾಗಿದ್ದ ಮಹಿಳೆಯೊಬ್ಬರು ಕೂಡ ನೂಪುರ್ ಅವರ ಬಳಿ ಬಂದು, ಆಕೆಯ 15 ವರ್ಷದ ಮಗಳೊಂದಿಗೆ ಕೂಡ ಇದೇ ರೀತಿ ವರ್ತಿಸಿದ್ದಾಗಿ ತಿಳಿಸಿದ್ದಾರೆ. ಇದೀಗ ಯುವಕನನ್ನು ಬಂಧಿಸಿ ಎಚ್ಚರಿಕೆ ನೀಡಿ ಬಿಡುಗಡೆಗೊಳಿಸಿದ್ದಾರೆ.

- Advertisement -

Latest News

error: Content is protected !!