Friday, May 17, 2024
Homeತಾಜಾ ಸುದ್ದಿದೇವದುರ್ಗ: ಪರಿಸರ ಮಾಹಿತಿ ಮತ್ತು ಜಾಗೃತಿ ಕಾರ್ಯಕ್ರಮ

ದೇವದುರ್ಗ: ಪರಿಸರ ಮಾಹಿತಿ ಮತ್ತು ಜಾಗೃತಿ ಕಾರ್ಯಕ್ರಮ

spot_img
- Advertisement -
- Advertisement -

ದೇವದುರ್ಗ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪರಿಸರಸ್ನೇಹಿ ಬಳಗ ಜಾಲಹಳ್ಳಿ ವತಿಯಿಂದ ಜಾಲಹಳ್ಳಿಯ ಮಾತೋಶ್ರೀ ಶಾಲಾ ಆವರಣದಲ್ಲಿ ಪರಿಸರ ಮಾಹಿತಿ ಮತ್ತು ಜಾಗೃತಿ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮವನ್ನು ಗ್ರಾ.ಪಂ ಅಧ್ಯಕ್ಷರು ದೀಪ ಬೆಳಗಿಸುವ ಮೂಲಕ ಹಾಗೂ ವೇದಿಕೆಯಲ್ಲಿರುವ ಗಣ್ಯರು ಗಿಡಕ್ಕೆ ನೀರುಣಿಸುವ ಮೂಲಕ ಉದ್ಘಾಟಿಸಿದರು.

ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ರಾಜೇಶ.ಎಂ ಕಾನರ್ಪರವರು ಮಾತನಾಡುತ್ತಾ ಬೆಳೆಯುತ್ತಿರುವ ವಿಜ್ಞಾನ-ತಂತ್ರಜ್ಞಾನದಿಂದಾಗಿ ಪರಿಸರದಿಂದ ನಾವು ದೂರವಾಗುತ್ತಿದ್ದೇವೆ. ಈಚೆಗಿನ ದಿನಗಳಲ್ಲಿ ಮಕ್ಕಳು ಪರಿಸರದಿಂದ ದೂರವಾಗುತ್ತಿದ್ದಾರೆ’ ಕೆಲ ವರ್ಷಗಳ ಹಿಂದೆ ಮಕ್ಕಳು ಪರಿಸರದೊಂದಿಗೆ ಆಟವಾಡುತ್ತ ಬೆಳೆಯುತ್ತಿದ್ದರು. ಆದರೆ ಇಂದಿನ ದಿನಗಳಲ್ಲಿ ತಂತ್ರಜ್ಞಾನದ ಜೊತೆ ಮಕ್ಕಳು ದೊಡ್ಡವರಾಗುತ್ತಿದ್ದಾರೆ. ಮಕ್ಕಳು ಪರಿಸರ ಸ್ನೇಹಿಯಾಗಿ ಬೆಳೆಯಬೇಕು. ಆದರೆ ಶಿಕ್ಷಣ ಹೆಚ್ಚುತ್ತ ಹೋದಂತೆ ಪರಿಸರದಿಂದ ದೂರವಾಗುತ್ತಿದ್ದಾರೆ. ಬದಲಾಗುತ್ತಿರುವ ಮಾನವನ ಜೀವನಶೈಲಿ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಅಣುಶಕ್ತಿ ಪರೀಕ್ಷೆ, ಜನಸಂಖ್ಯಾ ಸ್ಫೋಟ, ಹೆಚ್ಚುತ್ತಿರುವ ಕೈಗಾರಿಕೆಗಳು, ಅರಣ್ಯ ನಾಶದಿಂದ ಪ್ರಕೃತಿ ವಿಕೋಪ ಹೆಚ್ಚುತ್ತಿವೆ ಎಂದು ವಿಷಾದಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಪ್ರತಿ ತಾಲೂಕಿನಲ್ಲಿಯೂ ಕೆರೆಯಂಗಳದಲ್ಲಿ ಗಿಡನಾಟಿ, ಕಾಡಿನಲ್ಲಿ ಹಣ್ಣಿನ ಗಿಡಗಳನ್ನು ನಾಟಿ ಮಾಡುವ ಮೂಲಕ ಕಾಡುಪ್ರಾಣಿಗಳಿಗೂ ಜೀವನಾಧಾರ ಆಗುವಂತೆ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ನಿತ್ಯ ಮನುಷ್ಯ ಮತ್ತು ಪ್ರಾಣಿ ಸಂಕುಲಗಳ ನಡುವೆ ಸಂಘರ್ಷಗಳು ನಡೆಯುತ್ತಿರುವುದನ್ನು ಗಮನಿಸಿ ಕೊಂಡು ಧರ್ಮಸ್ಥಳದ ಧರ್ಮಾಧಿಕಾರಿಯವರು ಪ್ರಾಣಿಗಳಿಗೆ ಅನುಕೂಲ ಆಗುವಂತೆ ಕಾಡಿನಲ್ಲಿ ಹಣ್ಣಿನ ಗಿಡಗಳನ್ನು ನಾಟಿ ಮಾಡುವ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ರಾಜ್ಯಾದ್ಯಂತ ಈ ಕಾರ್ಯಕ್ರಮ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಪ್ರತಿಯೊಬ್ಬರು ಪರಿಸರಕಾಳಜಿಯೊಂದಿಗೆ ಸಮಾಜವನ್ನು ಜಾಗೃತಗೊಳಿಸುವ ಮಹತ್ಕಾರ್ಯಕ್ಕೆ ಮುಂದಾಗಬೇಕು. ಹುಟ್ಟು ಹಬ್ಬ ಆಚರಣೆಯ ಹೆಸರಿನಲ್ಲಿ ದುಂದುವೆಚ್ಚ ಮಾಡುವ ಬದಲು ಒಂದು ಗಿಡವಾಗಿ ಮಾಡಿ ಪರಿಸರಪ್ರೇಮಿಯಾಗಿ ಎಂದು ಕರೆನೀಡಿದರು.

ಮೇಲಪ್ಪ ಭಾವಿಮನಿ ಯವರು ಮಾತನಾಡುತ್ತಾ ಆರೋಗ್ಯ, ಶಿಕ್ಷಣ, ಪರಿಸರ ಇವು ಸಮತೋಲನವಾಗಿದ್ದರೆ ಯಾವುದೇ ಸಮಸ್ಯೆಯಿಲ್ಲದೇ ಜೀವನ ನಿರ್ವಹಣೆ ಮಾಡಬಹುದು. ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚು ಹೆಚ್ಚು ಮಾಡುತ್ತಿದ್ದು ಪರಿಸರ ಸಂರಕ್ಷಣೆಯ ಹಿತದೃಷ್ಟಿಯಿಂದ ಪ್ಲಾಸ್ಟಿಕ್ ಮುಕ್ತ ಮಾಡಿ ಉತ್ತಮ ಸಮಾಜ ನಿರ್ಮಾಣ ಮಾಡಬೇಕೆಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ  ಮಾತೋಶ್ರೀ ಹಿ.ಪ್ರಾ.ಶಾಲೆಯ ಮುಖ್ಯಸ್ಥರಾದ ಬಸವರಾಜು ಎಚ್.ಪಿ ರವರು ಮಾತನಾಡುತ್ತಾ  ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪರಿಸರವನ್ನು ಬಲಿ ಕೊಡುತ್ತಿದ್ದು ಧರ್ಮಸ್ಥಳದ ಪೂಜ್ಯರ ಆಶಯದಂತೆ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಇಂತಹ ಜಾಗೃತಿ ಕಾರ್ಯಕ್ರಮ ನಡೆಸುತ್ತಾ ಬರುತ್ತಿದ್ದು ಪ್ರತಿಯೊಬ್ಬರ ಮನೆ, ಮನದಿಂದ ಪರಿಸರದ ಬಗ್ಗೆ ಜಾಗೃತಿ ಮಾಡುವಂತಾಗಬೇಕು ಯುವ ಜನತೆ ಈ ಬಗ್ಗೆ ಯೋಚಿಸಿ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ವರ್ಗಾಯಿಸುವಲ್ಲಿ ಪ್ರಮುಖ ಪಾತ್ರವಹಿಸಬೇಕು ಎಂದರು.

ಕಾರ್ಯಕ್ರಮದಲ್ಲಿ  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾಜನಜಾಗೃತಿ ವೇದಿಕೆ ಸದಸ್ಯರಾದ  ಶರಣಪ್ಪ‌ ಹುಣಸಗಿ, ಗ್ರಾ.ಪಂ ಅಧ್ಯಕ್ಷರಾದ ಅಯ್ಯಪ್ಪ ಸ್ವಾಮಿ ಗಣಜಲಿ ಮಟ್, ಗ್ರಾಂ.ಪಂ ಸದಸ್ಯರಾದ ತಿಮ್ಮಣ್ಣ ನಾಯಕ್, ಮಲ್ಲಿಕಾರ್ಜುನ ಸೌದ್ರಿ, ಸಲಬಣ್ಣ ಸೌದ್ರಿ, ಗುರುನಾಯಕ್, ಶಿವಮಾನ್ಯಪ್ಪ, ಮುಕ್ತುಂ ಸಾಬ್, ಬಸವರಾಜು, ಪರಿಸರಪ್ರೇಮಿ ರಂಗಣ್ಣಕೊಲ್ಕರ್, ರಾಮನಗೌಡ, ಜೆ.ಜೆ. ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಮಾರುತಿ, ಅರಣ್ಯ ಇಲಾಖೆಯ ಮುದ್ದುರಂಗಪ್ಪ, ಕೃಷಿ ಮೇಲ್ವಿಚಾರಕರಾದ ಹುಚ್ಚಪ್ಪ, ಜಾಲಹಳ್ಳಿ ವಲಯದ ಮೇಲ್ವಿಚಾರಕರಾದ ಮಹಾಂತಯ್ಯ, ಸೇವಾಪ್ರತಿನಿಧಿ ಯಲ್ಲಪ್ಪ, ವಿಜಯಕುಮಾರ್, ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶರಣಪ್ಪ‌ ಹುಣಸಗಿ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.

- Advertisement -
spot_img

Latest News

error: Content is protected !!