Wednesday, June 26, 2024
Homeಕರಾವಳಿಉಡುಪಿಹೊಸತೊಂದು ಮೊದಲಿಗೆ ಸಾಕ್ಷಿಯಾಗುತ್ತಿದೆ ಮಂಗಳೂರು!.."ಭಾರತದ ಮೊದಲ ಕೋಸ್ಟ್ ಗಾರ್ಡ್ ಅಕಾಡೆಮಿಗೆ ಹಸಿರು ನಿಶಾನೆ"

ಹೊಸತೊಂದು ಮೊದಲಿಗೆ ಸಾಕ್ಷಿಯಾಗುತ್ತಿದೆ ಮಂಗಳೂರು!..”ಭಾರತದ ಮೊದಲ ಕೋಸ್ಟ್ ಗಾರ್ಡ್ ಅಕಾಡೆಮಿಗೆ ಹಸಿರು ನಿಶಾನೆ”

spot_img
- Advertisement -
- Advertisement -

ಮಂಗಳೂರು: ಕರಾವಳಿಗರ ನೆಚ್ಚಿನ ಕುಡ್ಲ ಈಗ ಹೊಸತೊಂದು ಮೊದಲಿಗೆ ಸಾಕ್ಷಿ ಯಾಗುತ್ತಿದೆ. ಭಾರತದ ಮೊದಲ ಕೋಸ್ಟ್ ಗಾರ್ಡ್ ಅಕಾಡೆಮಿ ಮಂಗಳೂರು ನಗರದಲ್ಲಿ ಸ್ಥಾಪಿಸಲು ರಕ್ಷಣಾ ಸಚಿವಾಲಯ ನಿರ್ಧರಿಸಿದೆ. ಈ ಹಿಂದೆ ಅಕಾಡೆಮಿಯನ್ನು ಕೇರಳದ ಕಣ್ಣೂರಿನ ಆಝೀಕ್ಕಲ್‌ನಲ್ಲಿ ಸ್ಥಾಪಿಸಬೇಕಿತ್ತು.


ಆದರೆ ಯಾವುದೇ ನಿರ್ಮಾಣಕ್ಕೆ ಅನುಮತಿ ಇಲ್ಲದ ಸಿಆರ್‌ಝಡ್‌ – 1 (ಎ) ಪ್ರದೇಶವಾದ್ದ ಕಾರಣ ಪರಿಸರ ಮತ್ತು ಅರಣ್ಯ ಸಚಿವಾಲಯವು ಈ ಯೋಜನೆಯನ್ನು ನಿರಾಕರಿಸಿತು. ಆ ಸಂದರ್ಭದಲ್ಲಿ ರಕ್ಷಣಾ ಸಚಿವರಾಗಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕಕ್ಕೆ ಸ್ಥಳಾಂತರಿಸಲು ನಿರ್ಧರಿಸಿ ಈಗ ಯೋಜನೆ ಜಾರಿಯಾಗುತ್ತಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ರಕ್ಷಣಾ ಸಚಿವಾಲಯ “ಮಂಗಳೂರಿನಲ್ಲಿ ಭಾರತದ ಮೊದಲ ಕೋಸ್ಟ್ ಗಾರ್ಡ್ ಅಕಾಡೆಮಿ ಸ್ಥಾಪನೆಯಾಗಲಿದೆ. ಐಸಿಜಿ ಅಕಾಡೆಮಿ ಸ್ಥಾಪಿಸಲು 158 ಎಕರೆ ಕೆಐಎಡಿಬಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ ಎಂದು ತಿಳಿಸಿದೆ.

ಇನ್ನು ಭಾರತದ ಮೊದಲ ಕೋಸ್ಟ್ ಗಾರ್ಡ್ ಅಕಾಡೆಮಿ ಮಂಗಳೂರಿನಲ್ಲಿ ಸ್ಥಾಪನೆಯಾಗಲಿದ್ದು ಹೊಸ ಅಕಾಡೆಮಿ ಕೋಸ್ಟ್ ಗಾರ್ಡ್ ಸಿಬ್ಬಂದಿಗೆ ವೃತ್ತಿಪರ ತರಬೇತಿಯನ್ನು ನೀಡಿ ಅವರು ಕರಾವಳಿ ಭದ್ರತೆಯನ್ನು ನಿಭಾಯಿಸಲಿದ್ದಾರೆ. ಪ್ರಸ್ತುತ ಕೇರಳದ ಕೊಚ್ಚಿಯಲ್ಲಿ ಕೋಸ್ಟ್ ಗಾರ್ಡ್ ಸಿಬ್ಬಂದಿಗಳಿಗೆ ತರಬೇತಿ ನಿರತರಾಗಿದ್ದಾರೆ .

- Advertisement -
spot_img

Latest News

error: Content is protected !!