Monday, August 31, 2026
Homeಕರಾವಳಿಉಡುಪಿಭಾರೀ ಮಳೆ ಹಿನ್ನೆಲೆ : ಮಂಗಳೂರು ವಿವಿ ಪದವಿ ಪರೀಕ್ಷೆ ಮುಂದೂಡಿಕೆ

ಭಾರೀ ಮಳೆ ಹಿನ್ನೆಲೆ : ಮಂಗಳೂರು ವಿವಿ ಪದವಿ ಪರೀಕ್ಷೆ ಮುಂದೂಡಿಕೆ

- Advertisement -
- Advertisement -

ಉಡುಪಿ : ಉಡುಪಿ-ಮಂಗಳೂರಿನಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ನಾಳೆ ನಡೆಯಬೇಕಿದ್ದ ಮಂಗಳೂರು ವಿಶ್ವವಿದ್ಯಾಲಯ ಪದವಿ ಪರೀಕ್ಷೆಗಳು ಮುಂಡೂಡಲಾಗಿದೆ.

ಉಡುಪಿ -ಮಂಗಳೂರು ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಹಲವು ಕಡೆಗಳಲ್ಲಿ ನೆರೆ ಸೃಷ್ಟಿಯಾಗಿದೆ. ನಗರದಲ್ಲಿ ನೂರಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಭಾರೀ ಮಳೆಗೆ ಮಲ್ಪೆಯಲ್ಲಿ ಮೂರು ಬೋಟ್ ಗಳು ಮುಳುಗಡೆಯಾಗಿದೆ. ಮೀನುಗಾರರು ಕಲ್ಲುಬಂಡೆಗಳ ಮೇಲೆ ಆಶ್ರಯ ಪಡೆದು ದಡ ಸೇರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಉಡುಪಿ-ಮಂಗಳೂರಿನಲ್ಲೂ ಮಳೆ ಆರ್ಭಟ ಮುಂದುವರೆದಿದ್ದು, ನಾಳೆ ನಡೆಯಬೇಕಿದ್ದ ಮಂಗಳೂರು ವಿವಿ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ.

- Advertisement -

Latest News

error: Content is protected !!