Wednesday, May 8, 2024
Homeಕ್ರೀಡೆಟೋಕಿಯೋ ಒಲಿಂಪಿಕ್ಸ್: ಭಾರತದ ಪುರುಷರ ಹಾಕಿ ತಂಡಕ್ಕೆ ಸೋಲು; ಕಂಚಿಗಾಗಿ ಹೋರಾಟ!!

ಟೋಕಿಯೋ ಒಲಿಂಪಿಕ್ಸ್: ಭಾರತದ ಪುರುಷರ ಹಾಕಿ ತಂಡಕ್ಕೆ ಸೋಲು; ಕಂಚಿಗಾಗಿ ಹೋರಾಟ!!

spot_img
- Advertisement -
- Advertisement -

ಟೋಕಿಯೋ: ಬೆಲ್ಜಿಯಂ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ 2-5 ಗೋಲುಗಳ ಅಂತರದಲ್ಲಿ ಸೋಲನುಭವಿಸಿದೆ.

ಮೊದಲ ಕ್ವಾರ್ಟರ್‌ನಲ್ಲಿ ಭಾರತ 2-1 ಗೋಲುಗಳ ಮುನ್ನಡೆ ಗಳಿಸಿತ್ತು. ಬೆಲ್ಜಿಯಂ ಪರ ಲೊಯಿಕ್ ಫ್ಯಾನಿ ಎ, ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಗಳಿಸಿದರೆ, ಮನ್‌ದೀಪ್ ಸಿಂಗ್ ಹಾಗೂ ಹರಮನ್‌ ಪ್ರೀತ್ ಸಿಂಗ್ ಎರಡು ಗೋಲುಗಳನ್ನು ಗಳಿಸಿ ಭಾರತ ತಿರುಗೇಟು ನೀಡಲು ಕಾರಣರಾದರು. ಎರಡನೇ ಕ್ವಾರ್ಟರ್‌ನಲ್ಲಿ ಬೆಲ್ಜಿಯಂ ಸಮಬಲ ಸಾಧಿಸಿದರೆ, ಮೂರನೇ ಕ್ವಾರ್ಟರ್‌ನಲ್ಲಿ ಉಭಯ ತಂಡಗಳಿಂದ ಯಾವ ಗೋಲೂ ಬರಲಿಲ್ಲ.

ನಾಲ್ಕನೇ ಕ್ವಾರ್ಟರ್‌ನ ಆರಂಭದಲ್ಲೇ ಆಕ್ರಮಣಕಾರಿ ಆಟಕ್ಕಿಳಿದ ಬೆಲ್ಜಿಯಂ ಪರ ಹೆಂಡ್ರಿಕ್ಸ್ ತಂಡಕ್ಕೆ ಮುನ್ನಡೆ ಗಳಿಸಿಕೊಟ್ಟರು. ಆಟ ಮುಗಿಯಲು 7 ನಿಮಿಷಗಳಿದ್ದಾಗ ಹೆಂಡ್ರಿಕ್ಸ್ ಮತ್ತೊಂದು ಪೆನಾಲ್ಟಿ ಸ್ಟ್ರೋಕ್‌ನಲ್ಲಿ ಗೋಲು ಗಳಿಸಿ ತಂಡದ ಮುನ್ನಡೆಯನ್ನು ಹಿಗ್ಗಿಸಿದರು. ಹೆಂಡ್ರಿಕ್ಸ್ ಈ ಪಂದ್ಯದಲ್ಲಿ ಹ್ಯಾಟ್ರಿಕ್ಸ್ ಸೇರಿದಂತೆ ಟೋಕಿಯೊದಲ್ಲಿ 14 ಗೋಲು ಹೊಡೆದು ಅಮೋಘ ಸಾಧನೆ ಮಾಡಿದರು.

ಸೆಮಿಫೈನಲ್‌ನಲ್ಲಿ ಬೆಲ್ಜಿಯಂ ವಿರುದ್ಧ 2-5 ಗೋಲುಗಳಿಂದ ಪರಾಭವಗೊಳ್ಳುವ ಮೂಲಕ ಭಾರತ ಕಂಚಿನ ಪದಕಕ್ಕಾಗಿ ಆಡಬೇಕಿದೆ.

- Advertisement -
spot_img

Latest News

error: Content is protected !!