Sunday, June 30, 2024
HomeWorldಕೆಂಪು ಕೋಟೆಯಲ್ಲಿ ಪ್ರಧಾನಿ ಮೋದಿ ಭಾಷಣ: 'ನ್ಯಾಷನಲ್ ಹೈಡ್ರೋಜನ್ ಮಿಷನ್' ಘೋಷಣೆ

ಕೆಂಪು ಕೋಟೆಯಲ್ಲಿ ಪ್ರಧಾನಿ ಮೋದಿ ಭಾಷಣ: ‘ನ್ಯಾಷನಲ್ ಹೈಡ್ರೋಜನ್ ಮಿಷನ್’ ಘೋಷಣೆ

spot_img
- Advertisement -
- Advertisement -

ನವದೆಹಲಿ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಬೆಳಗ್ಗೆ 7.30ಕ್ಕೆ ದೆಹಲಿಯ ಕೆಂಪುಕೋಟಡಯಲ್ಲಿ ತ್ರಿವರ್ಣ ಧ್ವಜ ಹಾರಿಸುವ ಮೂಲಕ 75 ನೇ ಸ್ವಾತಂತ್ರ್ಯೋತ್ಸವ ಆಚರಿಸಿದ್ದಾರೆ.

ಧ್ವಜಾರೋಹಣದ ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶದ ಜನತೆಗ 75 ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ಮಹತ್ಮಾ ಗಾಂಧೀಜಿ, ಸುಭಾಸ್ ಚಂದ್ರಬೋಸ್, ಚಂದ್ರಶೇಖರ್ ಅಜಾದ್, ರಾಣಿ ಲಕ್ಷ್ಮೀಬಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಜವಾಹಾರ್ ಲಾಲ್ ನೆಹರು, ಸರ್ದರ್ ವಲ್ಲಭಬಾಯಿ ಪಟೇಲ್ ಸೇರಿದಂತೆ ಹಲವು ನಾಯಕರು ನಮಗೆ ಗುಲಾಮಗಿರಿಯಿಂದ ಮುಕ್ತಗೊಳಿಸಿದ್ದಾರೆ. ಹೀಗಾಗಿ ಇಂದು ಶತಮಾನಗಳ ಸಂಘರ್ಷದಲ್ಲಿ ಭಾಗಿಯಾದವರಿಗೆ ಗೌರವಸಲ್ಲಿಸಬೇಕಿದೆ ಎಂದು ಹೇಳಿದರು.

ಕೊರೊನಾ ಮಹಾಮಾರಿ ನಮಗೆ ದೊಡ್ಡ ಸವಾಲಾಗಿದೆ. ಭಾರತ ಕೊರೊನಾ ಲಸಿಕೆಗಾಗಿ ಬೇರೆ ದೇಶಗಳ ಮೇಲೆ ಅವಲಂಬಿತವಾಗಿರಬಾರದು. ವಿಶ್ವದ ದೊಡ್ಡ ಲಸಿಕಾ ಅಭಿಯಾನ ಭಾರತದಲ್ಲಿ ನಡೆಯುತ್ತಿದೆ. ಇದನ್ನು ಹೆಮ್ಮೆಯಿಂದ ಹೇಳುತ್ತೇನೆ. 54 ಕೋಟಿ ಜನರ ಕೋವಿಡ್ ಲಸಕೆಯನ್ನು ಪಡೆದಿದ್ದಾರೆ. ಬೇರೆ ದೇಶಗಳಲಿ ಹೋಲಿಸಿದರೆ ಕೊರೊನಾ ಸೋಂಕು ದೇಶದಲ್ಲಿ ಕಡಿಮೆ ಜನರಿಗೆ ತಗುಲಿದೆ. ಕೊರೊನಾದಿಂದ ಎಷ್ಟೋ ಮಕ್ಕಳು ಅನಾಥರಾಗಿದ್ದಾರೆ. ಈ ಮಹಾ ಪೀಡೆ ಶಾಶ್ವಾತವಾಗಿ ನಮ್ಮ ಜೊತೆಗೆ ಇರಲಿದೆ. ಆದ್ರೂ ದೇಶವು ಹೊಸ ಸಂಕಲ್ಪದೊಂದಿಗೆ ಮುಂದೆ ಸಾಗಬೇಕಿದೆ ಎಂದರು.

ಮುಂದಿನ 25 ವರ್ಷಗಳ ಬಳಿಕ ಶತಮಾನೋತ್ಸವ ಸ್ವಾತಂತ್ರ್ಯ ದಿನಾಚರಣೆ ಆಚರಿಸಬೇಕಿದೆ. ವಿಶ್ವದ ಎಲ್ಲ ಆಧುನಿಕ ಸೌಲಭ್ಯಗಳು ಇರಬೇಕು. ಬೇರೆ ಯಾವ ದೇಶಕ್ಕೂ ನಾವು ಕಡಿಮೆ ಇರಬಾರದು. ನಮ್ಮ ದೇಶವನ್ನು ಬದಲಾವಣೆ ಮಾಡಬೇಕು. ನಾಗರೀಕರಾಗಿ ನಮ್ಮನ್ನು ನಾವು ಬದಲಾಯಿಸಿಕೊಳ್ಳಬೇಕು. ಸಬ್ ಕಾ ಸಾಥ್ ಸಬ್ ಕಾ ವಿಶ್ವಾಸ್ ಜೊತೆಗೆ, ಸಬ್ ಸಬ್ ಕಾ ಪ್ರಯಾಸ್ ನಮ್ಮ ಹೊಸ ಘೋಷಣೆ ಎಂದು ಹೇಳಿದರು.

ದೇಶದ ಗ್ರಾಮಗಳಲ್ಲಿ ಶೇ 100 ರಷ್ಟು ರಸ್ತೆ, ಬ್ಯಾಂಕ್ ಖಾತೆ, ಆಯುಷ್ಮಾನ್ ಯೋಜನೆ. ವಿಮಾ ಯೋಜನೆ, ಪಿಂಚಣಿ ಯೋಜನೆ, ವಸತಿ ಯೋಜನೆ ಜನರಿಗೆ ತಲುಪಬೇಕು. ಪುಟ್ ಪಾತ್ ವ್ಯಾಪಾರಿಗಳಿಗೆ ಸ್ವನಿಧಿ ಯೋಜನೆ ಜಾರಿ, ಎಲ್ಲ ಮನೆಗಳಲ್ಲಿ ಶೇ.100 ರಷ್ಟು ಶೌಚಾಲಯ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ ಎಂದು ತಿಳಿಸಿದರು.

ಹರ್ ಘರ್ ಜಲ್ ಮಿಷನ್ ಜಾರಿಗೆ ಶ್ರಮಿಸುತ್ತಿದೆ. 2 ವರ್ಷದಲ್ಲಿ 4.5 ಕೋಟಿ ಮನೆಗಳಿಗೆ ನೀರು ಪೂರೈಕೆ ಮಾಡಲಾಗಿದೆ. ಮಕ್ಕಳಲ್ಲಿ ಪೌಷ್ಟಿಕಾಂತ ಕೊರೊತೆ ಆಗದಂತೆ ನೋಡಿಕೊಳ್ಳಬೇಕು ಸರ್ಕಾರ ಬೇರೆ ಬೇರೆ ಯೋಜನೆಗಳಲ್ಲಿ ಬಡವರಿಗೆ ಅಕ್ಕಿ ನೀಡುತ್ತಿದೆ. ಬಡವರಿಗೆ ಪೌಷ್ಟಿಕಾಂಶಯುಕ್ತ ಆಹಾರ ಧಾನ್ಯ ನೀಡಲಾಗುತ್ತಿದೆ. ಪ್ರತಿಯೊಬ್ಬ ಬಡವರಿಗೆ ಉತ್ತಮ ಆರೋಗ್ಯ ಸೌಲಭ್ಯ, ಇದಕ್ಕಾಗಿ ವೈದ್ಯ ಶಿಕ್ಷಣದಲ್ಲಿ ಸುಧಾರಣೆ ತರಲಾಗಿದೆ. ದೇಶದಲ್ಲಿ ಮೆಡಿಕಲ್ ಸೀಟ್ ಗಳನ್ನು ಹೆಚ್ಚಿಸಲಾಗಿದೆ. ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡಲಾಗುತ್ತಿದೆ.

ಕೃಷಿ ಕ್ಷೇತ್ರದಲ್ಲೂ ವೈಜ್ಞಾನಿಕ ತಂತ್ರಜ್ಞಾನ ಅಲವಡಿಕೊಳ್ಳಬೇಕಿದೆ. ಈ ಮೂಲಕ ಹೆಚ್ಚು ಬೆಳೆ ಬೆಳೆಯೋಕೆ ಮುಂದಾಗಬೇಕಿದೆ. ರೈತರ ಜಮೀನು ಚಿಕ್ಕದಾಗುತ್ತಾ ಹೋಗುತ್ತಿದ್ದು, ದೇಶದ ಬಹುತೇಕ ರೈತರ ಬಳಿ 2 ಹೆಕ್ಟೇರ್ ಗಿಂತ ಕಡಿಮೆ ಭೂಮಿ ಇದೆ. ಈ ಮೂಲಕ ಸಣ್ಣ ರೈತ ಸಂಖ್ಯೆ ಹೆಚ್ಚಾಗುತ್ತಿದೆ. 10 ಕೋಟಿಗೂ ಹೆಚ್ಚು ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯ ಲಾಭವಾಗುತ್ತಿದೆ. ಸಣ್ಣ ರೈತರು ಈ ದೇಶದ ಹೆಮ್ಮೆ ಎಂದು ಹೇಳಿದ್ದಾರೆ.

ಇನ್ನು ಅಜಾದಿ ಕಾ ಅಮೃತ್ ಮಹೋತ್ಸವ 2023 ರವರೆಗೆ ಮುಂದುವರೆಯಲಿದೆ. ನಿಟ್ಟಿನಲ್ಲಿ ದೇಶ ಮಹತ್ವದ ತೀರ್ಮಾನ ಕೈಗೊಂಡಿದೆ. 75 ವಂದೇ ಭಾರತ್ ಟ್ರೈನ್ ದೇಶದಲ್ಲಿ ಸಂಚರಿಸಬೇಕು ಎಂದು ಹೇಳಿದರು.

ಪ್ರಧಾನಿ ಮಂತ್ರಿ ಗತಿ ಶಕ್ತಿಯ ನ್ಯಾಷನಲ್ ಮಾಸ್ಟರ್ ಪ್ಲ್ಯಾನ್ ಈ ಯೋಜನೆಗೆ ಮುಂದಿನ ದಿನಗಳಲ್ಲಿ ಚಾಲನೆ ನೀಡಲಾಗುತ್ತಿದ್ದು, 100 ಲಕ್ಷ ಕೋಟಿ ಯೋಜನೆ ಮೂಲಕ ಉದ್ಯೋಗ ಸೃಷ್ಟಿ ಮಾಡಲಾಗುತ್ತಿದೆ ಎಂದರು.

ಭಾರತ ಇಂಧನ ಸ್ವಾವಲಂಭಿಯಾಗಬೇಕು. ಶತಮಾನೋತ್ಸವಕ್ಕೂ ಮುನ್ನ ಇದಕ್ಕಾಗಿ ಪ್ಲ್ಯಾನ್ ಮಾಡಲಾಗಿದೆ. 2030 ರೊಳಗೆ ರೈಲ್ವೆಯಲ್ಲಿ ಶೂನ್ಯ ಮಾಲಿನ್ಯದ ಗುರಿ ಹಾಕಿಕೊಳ್ಳಲಾಗಿದೆ. ರಾಷ್ಟ್ರೀಯ ಭದ್ರತೆಯಂತೆ ಪರಿಸರ ಭದ್ರತೆಗೂ ನಿರ್ಧರಿಸಲಾಗಿದೆ. ಭಾರತ ಇಂಧನಕ್ಕಾಗಿ ವರ್ಷಕ್ಕೆ 12 ಲಕ್ಷ ಕೋಟಿ ರೂ. ಖರ್ಚು ಮಾಡುತ್ತಿದೆ. ನ್ಯಾಷನಲ್ ಹೈಡ್ರೋಜನ್ ಮಿಷನ್ ಘೋಷಣೆ ಭಾರತವನ್ನು ಹೈಡ್ರೋಜನ್ ರಪ್ತು ಮಾಡುವ ಹಬ್ ಮಾಡಲಾಗುತ್ತದೆ. ಈ ತ್ರಿವರ್ಣ ಸಾಕ್ಷಿಯಾಗಿಟ್ಟುಕೊಂಡು ಹೈಡ್ರೋಜನ್ ಮಿಷನ್ ಘೋಷಣೆ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ

- Advertisement -
spot_img

Latest News

error: Content is protected !!