Sunday, May 5, 2024
Homeಅಪರಾಧವಾಟ್ಸಾಪ್ ಬಳಕೆದಾರರೆ ಎಚ್ಚರ... ಎಚ್ಚರ; ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಸೈಬರ್ ಅಪರಾಧಗಳು!

ವಾಟ್ಸಾಪ್ ಬಳಕೆದಾರರೆ ಎಚ್ಚರ… ಎಚ್ಚರ; ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಸೈಬರ್ ಅಪರಾಧಗಳು!

spot_img
- Advertisement -
- Advertisement -

ಮಂಗಳೂರು: ವಾಟ್ಸಾಪ್ ನಲ್ಲಿ ನಕಲಿ ಪ್ರೊಫೈಲ್‌ ಸೃಷ್ಟಿಸಿ ವಂಚನೆ ಮಾಡುವವರ ಬಗ್ಗೆ ಸೈಬರ್‌ ಭದ್ರತಾ ತಜ್ಞರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

ನಗರದ ವ್ಯಕ್ತಿಯೊಬ್ಬರಿಗೆ ವಾಟ್ಸಾಪ್ ನ ನಕಲಿ ಪ್ರೊಫೈಲ್‌ ಮೂಲಕ ತುರ್ತು ಹಣಕ್ಕಾಗಿ ಕೋರಿಕೆ ಬಂದಿದ್ದು ಸಂದೇಹಗೊಂಡ ಅವರು ಸೈಬರ್‌ ತಜ್ಞರ ಮೂಲಕ ಪರಿಶೀಲಿಸಿದಾಗ ಅದು ವಂಚನೆ ಪ್ರಯತ್ನ ಎಂಬುದು ಸ್ಪಷ್ಟವಾಗಿದೆ .

ನಮ್ಮ ಕುಟುಂಬ ಸದಸ್ಯರ ಅಥವಾ ಗೆಳೆಯರ ಫೋಟೋ (ಡಿಪಿ) ಸಂಗ್ರಹಿಸಿ ಅದನ್ನು ಹೊಸದೊಂದು ನಂಬರ್‌ಗೆ ಅಳವಡಿಸುತ್ತಾರೆ. ಅನಂತರ ಆ ನಕಲಿ ಪ್ರೊಫೈಲ್‌ನಲ್ಲಿ ನಮಗೆ, ನಮ್ಮ ಗೆಳೆಯರು, ಕುಟುಂಬಿಕರಿಗೆ ಸಂದೇಶ ಕಳುಹಿಸಿ, ನಾನು ನಿಮ್ಮ ಗೆಳೆಯ, ಇದು ನನ್ನ ಹೊಸ ವಾಟ್ಸಾಪ್ ನಂಬರ್‌ ಎಂದು ನಂಬಿಸುತ್ತಾರೆ. ಕೆಲವು ಸಮಯದ ಬಳಿಕ ನಮ್ಮ ಮೊಬೈಲ್‌ಗೆ ವಾಟ್ಸಾಪ್ ಸಂದೇಶ ಮಾಡಿ, ತುರ್ತಾಗಿ ಹಣದ ಅವಶ್ಯಕತೆ ಇದ್ದು ಕೂಡಲೇ ಕಳುಹಿಸಿಕೊಡಿ ಎಂದು ಮನವಿ ಮಾಡುತ್ತಾರೆ. ಇದನ್ನು ನಂಬಿ ಸಂಖ್ಯೆಗೆ ಕರೆ ಮಾಡಿ ವಿಚಾರಿಸದೆ ಹಣ ಕಳುಹಿಸಿ ವಂಚನೆಗೆ ಒಳಗಾಗುತ್ತಾರೆ. ಹಾಗೆಯೆ ಇನ್ನೊಂದು ರೀತಿಯ ವಂಚನೆಗೆ ಒಳಗಾಗಬಹುದು ಅದು ನಮ್ಮ ಮೊಬೈಲ್‌ನಿಂದ ಒಟಿಪಿಯನ್ನೇ ಕದ್ದು ಆ ಮೂಲಕ ನಮ್ಮ ವಾಟ್ಸಾಪ್ ಅನ್ನೇ ಅವರ ಮೊಬೈಲ್‌ಗೆ ವರ್ಗಾಯಿಸಿಕೊಳ್ಳುತ್ತದೆ. ನಮ್ಮ ವಾಟ್ಸಾಪ್ ಸಂಖ್ಯೆ ಗೊತ್ತಿರುವವರ ಬಳಿ ನಮ್ಮ ಮೊಬೈಲನ್ನು ಇಟ್ಟಿದ್ದರೆ ಇದು ಸಾಧ್ಯವಾಗುತ್ತದೆ.

ಸೈಬರ್‌ ಭದ್ರತಾ ತಜ್ಞರ ಪ್ರಕಾರ ವಂಚನೆಯ ವಿಧಾನ ಹೀಗಿದೆ: ನಮ್ಮ ಪಕ್ಕದಲ್ಲಿ ಇರಬಹುದಾದ ವ್ಯಕ್ತಿ ಆತನ ಮೊಬೈಲ್‌ಗೆ ವಾಟ್ಸಾಪ್ ಅನ್ನು ಹೊಸದಾಗಿ ಇನ್‌ಸ್ಟಾಲ್‌ ಮಾಡುವಾಗ ನಮ್ಮ ವಾಟ್ಸಾಪ್ ಸಂಖ್ಯೆ ನೀಡುತ್ತಾನೆ. ಇನ್‌ಸ್ಟಾಲ್‌ ಆಗುವ ಮೊದಲು ಒಟಿಪಿಯನ್ನು ಕೇಳಲಾಗುತ್ತದೆ. ಆ ಒಟಿಪಿ ನಮ್ಮ ಮೊಬೈಲ್‌ಗೆ ಬಂದಿರುತ್ತದೆ. ನಮ್ಮ ಮೊಬೈಲ್‌ ಆತನ ಎದುರು ಇದ್ದರೆ ಒಟಿಪಿ ಬರುವಾಗ ಅದು ಅವನಿಗೆ ಕಾಣಿಸುತ್ತದೆ (ಮೊಬೈಲ್‌ ಲಾಕ್‌ ತೆಗೆಯದಿದ್ದರೂ ಒಟಿಪಿ ಕಾಣಿಸುತ್ತದೆ). ಆ ಒಟಿಪಿ ಆಧಾರದಲ್ಲಿ ನಮ್ಮ ಮೊಬೈಲ್‌ನ ಸಂಖ್ಯೆಯ ವಾಟ್ಸ್‌ಆಯಪ್‌ ಅವನ ಮೊಬೈಲ್‌ನಲ್ಲಿ ಕಾರ್ಯಾಚರಿಸುತ್ತದೆ.

ಹೀಗೆಯೇ ನಮ್ಮ ಮೊಬೈಲ್‌ಗೆ ಬರುವ ಟೆಕ್ಸ್ಟ್ ಮೆಸೇಜ್‌ನ ಒಂದು ಪ್ರತಿ ಇನ್ನೊಬ್ಬರ ಮೊಬೈಲ್‌ಗೂ ಬರುವಂತಹ ಆಯಪ್‌ ಇದ್ದು ಅದರ ಮೂಲಕವೂ ಭಾರೀ ವಂಚನೆ ನಡೆಯುತ್ತದೆ ಎನ್ನುತ್ತಾರೆ ಸೈಬರ್‌ ಭದ್ರತಾ ತಜ್ಞರು. ಮೊಬೈಲ್‌ಗೆ ಬರುವ ಆಯಪ್‌ ಅನ್ನು ಡೌನ್‌ಲೋಡ್‌ ಮಾಡಿದರೆ ನಮ್ಮ ಮೊಬೈಲ್‌ಗೆ ಬರುವ ಪ್ರತಿ ಟೆಕ್ಸ್ಟ್ ಮೆಸೇಜ್‌ ಸೈಬರ್‌ ಖದೀಮರ ಮೊಬೈಲ್‌ ಗೂ ರವಾನೆಯಾಗುತ್ತದೆ. ಇದೇ ರೀತಿ ಎಲ್ಲ ರೀತಿಯ ಒಟಿಪಿ ಕೂಡ ಖದೀಮರ ಮೊಬೈಲ್‌ಗೆ ಸಿಗುತ್ತದೆ.

ಫೇಸ್‌ಬುಕ್‌ನಲ್ಲಿ ನಕಲಿ ಪ್ರೊಫೈಲ್‌ ಸೃಷ್ಟಿಸಿ ವಂಚಿಸುತ್ತಿರುವ ಪ್ರಕರಣಗಳು ಹಲವಾರು ನಡೆದಿವೆ. ಇದೀಗ ನಕಲಿ ವಾಟ್ಸಾಪ್ ಪ್ರೊಫೈಲ್‌ ಸೃಷ್ಟಿಸಿ ವಂಚಿಸಲು ಯತ್ನಿಸಿರುವ ಎರಡು ಪ್ರಕರಣಗಳೂ ಗಮನಕ್ಕೆ ಬಂದಿವೆ. ಎಚ್ಚರಿಕೆಯ ನಡೆಯಿಂದಾಗಿ ಯಾರಿಗೂ ತೊಂದರೆಯಾಗಿಲ್ಲ. ವಂಚಕರ ಬಗ್ಗೆ ಎಚ್ಚರ ವಹಿಸಬೇಕು ಎನ್ನುತ್ತಾರೆ ಸೈಬರ್‌ ಭದ್ರತಾ ತಜ್ಞರು.

- Advertisement -
spot_img

Latest News

error: Content is protected !!