Thursday, May 16, 2024
Homeಕರಾವಳಿಉಡುಪಿಉಡುಪಿ ಜಿಲ್ಲೆಯಲ್ಲಿ ಕೋವಿಡ್‌ಗೆ ವಾರದಲ್ಲಿ ಇಬ್ಬರು ಬಲಿ

ಉಡುಪಿ ಜಿಲ್ಲೆಯಲ್ಲಿ ಕೋವಿಡ್‌ಗೆ ವಾರದಲ್ಲಿ ಇಬ್ಬರು ಬಲಿ

spot_img
- Advertisement -
- Advertisement -

ಉಡುಪಿ: ಉಡುಪಿ ಜಿಲ್ಲೆಯಲ್ಲಿ ವಾರದಲ್ಲಿ ಕೋವಿಡ್ ಸತತ ಎರಡನೇ ಬಲಿ ಪಡೆದಿದೆ. ಮೊನ್ನೆ 98ರ ವೃದ್ಧರೊಬ್ಬರು ಕೋವಿಡ್‌ಗೆ ಬಲಿಯಾದರೆ ನಿನ್ನೆ ಉಡುಪಿಯ 90ವರ್ಷ ಪ್ರಾಯದ ಹಿರಿಯ ನಾಗರೀಕರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಈ ಮೂಲಕ ಜಿಲ್ಲೆಯಲ್ಲಿ ಕೋವಿಡ್‌ಗೆ ಅಧಿಕೃತವಾಗಿ ಬಲಿಯಾದವರ ಸಂಖ್ಯೆ 549ಕ್ಕೇರಿದೆ. ಈ ವರ್ಷ ಕೋವಿಡ್‌ನಿಂದ ಮೃತಪಟ್ಟವರು 56 ಮಂದಿ.

ಬುಧವಾರ ಜಿಲ್ಲೆಯಲ್ಲಿ 11ಮಂದಿ ಕೋವಿಡ್‌ಗೆ ಪಾಸಿಟಿವ್ ಬಂದಿದ್ದು, 16 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. 51 ಮಂದಿ ಈಗಲೂ ಚಿಕಿತ್ಸೆಯಲ್ಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

- Advertisement -
spot_img

Latest News

error: Content is protected !!