Thursday, June 4, 2026
Homeಕೊಡಗುಮಡಿಕೇರಿಯಲ್ಲಿ ಯುವತಿ ಅಪಹರಣ ಪ್ರಕರಣಕ್ಕೆ ಕಾಮಿಡಿ ಟ್ವಿಸ್ಟ್ : ಬೆಕ್ಕಿಗೆ ಆಟ ಇಲಿಗೆ ಪ್ರಾಣ...

ಮಡಿಕೇರಿಯಲ್ಲಿ ಯುವತಿ ಅಪಹರಣ ಪ್ರಕರಣಕ್ಕೆ ಕಾಮಿಡಿ ಟ್ವಿಸ್ಟ್ : ಬೆಕ್ಕಿಗೆ ಆಟ ಇಲಿಗೆ ಪ್ರಾಣ ಸಂಕಟ ಅಂದಗಾಯ್ತು ಪೊಲೀಸರ ಪಾಡು

- Advertisement -
- Advertisement -

ಮಡಿಕೇರಿ: ನಗರದ ಹೊರವಲಯದ ಕಮಾನು ಗೇಟ್ ಬಳಿ ಯುವತಿಯೊಬ್ಬಳನ್ನು ಇನ್ನೋವಾ ಕಾರಿನಲ್ಲಿ ಬಲವಂತದಿಂದ ಎಳೆದು ಹಾಕಿ ಅಪಹರಣ ಮಾಡಲಾಗಿದೆ ಎಂದು ನಿನ್ನೆ ದೊಡ್ಡ ಸುದ್ದಿಯಾಗಿತ್ತು. ಇದೀಗ ಈ ಘಟನೆಗೆ ಕಾಮಿಡಿ ಟ್ವಿಸ್ಟ್ ಸಿಕ್ಕಿದೆ.

ಅಂದ್ಹಾಗೆ ಮಂಡ್ಯ ಮೂಲದ ಯುವತಿಯಾಗಿರುವ ಆಕೆ ತನ್ನ ಗೆಳೆಯರೊಂದಿಗೆ ಮಡಿಕೇರಿಗೆ ಟ್ರಿಪ್ ಬಂದಿದ್ದಳು. ಈ ವೇಳೆ ಯುವತಿಯೊಂದಿಗೆ ಗೆಳೆಯರು ನೀನು ಕೈಯಲ್ಲಿ ಕ್ಯಾಶ್ ಇಲ್ಲದೇ ಊರಿಗೆ ಹೋಗಬೇಕು ಎಂದು ಚಾಲೆಂಜ್ ಹಾಕಿದ್ದಾರೆ. ಚಾಲೆಂಜ್ ಸ್ವೀಕರಿಸಿದ ಯುವತಿ ತಾನು ಬಂದಿದ್ದ ಇನ್ನೋವಾ ಕಾರಿನಿಂದ ಇಳಿದ್ದಾಳೆ. ಬಳಿಕ ರೆಹಮಾನ್ ಎಂಬವರ ಅಂಗಡಿಗೆ ತೆರಳಿ 500 ರೂಪಾಯಿ ಗೂಗಲ್ ಪೇ ಮಾಡಿ ಕ್ಯಾಶ್ ಪಡೆದುಕೊಂಡಿದ್ದಾಳೆ.

ಇದೇ ವೇಳೆ ಕಾರಿನಲ್ಲಿ ಆಕೆಯನ್ನು ಹುಡುಕುತ್ತಾ ಬಂದ ಆಕೆಯ ಗೆಳೆಯರು ಆಕೆಯನ್ನು ಕಾರಿನೊಳಕ್ಕೆ ಎಳೆದು ಹಾಕಿಕೊಂಡು ಸೀದಾ ತೆರಳಿದ್ದಾರೆ. ಇದನ್ನು ಗಮನಿಸಿದ ಅಂಗಡಿ ಮಾಲೀಕ ಹಾಗೂ ಅಲ್ಲಿದ್ದವರು ಅಪಹರಣ ಎಂದು ಭಾವಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ನಿಜಾಂಶ ಗೊತ್ತಾಗಿ ಪೊಲೀಸರಿಗೆ ಬಹುದೊಡ್ಡ ತಲೆನೋವು ತಪ್ಪಿದೆ. ಆದರೆ ಗೆಳೆಯರ ತಮಾಷೆಯಿಂದಾಗಿ ಬೆಕ್ಕಿಗೆ ಆಟ ಇಲಿಗೆ ಪ್ರಾಣ ಸಂಕಟ ಎಂಬಂತಾಗಿದೆ ಪೊಲೀಸರ ಕಥೆ. ಇನ್ನು ಘಟನೆಗೆ ಸಂಬಂಧಪಟ್ಟಂತೆ ಯುವತಿಯನ್ನು ಬಲವಂತವಾಗಿ ಎಳೆದುಕೊಂಡು ಹೋದ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!