Monday, June 8, 2026
Homeತಾಜಾ ಸುದ್ದಿಮಹಾರಾಷ್ಟ್ರ ಸರ್ಕಾರಕ್ಕೆ ಮುಖಭಂಗ- ಬಾಂಬೆ ಹೈಕೋರ್ಟ್​ನಿಂದ ಕಂಗನಾ ರಣಾವತ್ ಗೆ ಬಿಗ್ ರಿಲೀಫ್

ಮಹಾರಾಷ್ಟ್ರ ಸರ್ಕಾರಕ್ಕೆ ಮುಖಭಂಗ- ಬಾಂಬೆ ಹೈಕೋರ್ಟ್​ನಿಂದ ಕಂಗನಾ ರಣಾವತ್ ಗೆ ಬಿಗ್ ರಿಲೀಫ್

- Advertisement -
- Advertisement -

ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ಗೆ ಬಿಗ್ ರಿಲೀಫ್ ಸಿಕ್ಕಿದೆ. ಕಾನೂನು ಉಲ್ಲಂಘಿಸಿ ಕಟ್ಟಡ ನಿರ್ಮಾಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟಡ ಧ್ವಂಸ ಗೊಳಿಸುವುದಾಗಿ ಮುಂಬೈ ಮಹಾನಗರ ಪಾಲಿಕೆ ಜಾರಿ ಮಾಡಿದ್ದ ನೋಟೀಸ್ ನ್ನು ಬಾಂಬೆ ಹೈಕೋರ್ಟ್ ರದ್ದುಗೊಳಿಸಿದೆ.

ಮುಂಬೈ ಮಹಾನಗರ ಪಾಲಿಕೆ ಕ್ರಮವನ್ನು ಪ್ರಶ್ನಿಸಿ ಕಂಗನಾ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಧ್ವೇಷ ಸಾಧನೆಗಾಗಿ ಕಟ್ಟಡ ಕೆಡವುದು ಸರಿಯಲ್ಲ ಎಂದು ಹೇಳಿ ಪಾಲಿಕೆ ನೋಟೀಸ್ ರದ್ದುಗೊಳಿಸಿದೆ.

ಕೋರ್ಟ್​ ಆದೇಶದ ನಂತರ ಟ್ವೀಟ್​ ಮಾಡಿರುವ ಕಂಗನಾ,’ ಸತ್ಯಕ್ಕೆ ಜಯವಾಗಿದೆ. ಈ ಹೋರಾಟದಲ್ಲಿ ನನಗೆ ಧೈರ್ಯ ತುಂಬಿ ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದಗಳು. ತೀರ್ಪು ಬರಲು ಕಾರಣರಾದ ʼವಿಲನ್‌ʼಗಳಿಗೂ ಧನ್ಯವಾದ’ ಎಂದು ಹೇಳಿದ್ದಾರೆ.

- Advertisement -

Latest News

error: Content is protected !!