Sunday, May 19, 2024
Homeಕರಾವಳಿಕುಮಾರಧಾರ ನದಿಯಲ್ಲಿ ಸಿಡಿಮದ್ದು ಬಳಸಿ ಮೀನುಗಳ ಬೇಟೆ !

ಕುಮಾರಧಾರ ನದಿಯಲ್ಲಿ ಸಿಡಿಮದ್ದು ಬಳಸಿ ಮೀನುಗಳ ಬೇಟೆ !

spot_img
- Advertisement -
- Advertisement -

ಕಡಬ: ಕುಮಾರಧಾರ ನದಿಯಲ್ಲಿ ತಂಡವೊಂದು ಸಿಡಿಮದ್ದು ಬಳಸಿ ಮೀನು ಹಿಡಿಯುತ್ತಿರುವುದು ಬೆಳಕಿಗೆ ಬಂದಿದೆ. ಇಲ್ಲಿನ ಸ್ಥಳೀಯರು ಸಾಂಪ್ರದಾಯಕವಾಗಿ ಗಾಳ ಹಾಕಿ ಅಥವಾ ಬಲೆ ಹಾಕಿ ಮೀನು ಹಿಡಿಯುತ್ತಾರೆ. ಆದರೆ ಕಿಡಿಗೇಡಿಗಳ ತಂಡವೊಂದು ಸಿಡಿಮದ್ದುಗಳನ್ನು ಬಳಸಿ ಮೀನು ಹಿಡಿಯುತ್ತಿದ್ದಾರೆ.

ಅಳಿವಿನಂಚಿನಲ್ಲಿರುವ ಅದೆಷ್ಟೋ ಅಪರೂಪದ ಮೀನುಗಳು ಇದರಿಂದ ತನ್ನ ಸಂತತಿಯನ್ನು ಕಳೆದುಕೊಳ್ಳುತ್ತಿದೆ. ನದಿಯ ಆಳದಲ್ಲಿರುವ ಮೀನುಗಳನ್ನು ಹಿಡಿಯುವ ಸಲುವಾಗಿ ಸಿಡಿಮದ್ದುಗಳನ್ನು ಬಳಸಿ ಮೀನು ಹಿಡಿಯುತ್ತಿದ್ದಾರೆ.

ಇದರಿಂದ ಮೀನುಗಳು ಅಷ್ಟೇ ಅಲ್ಲದೆ ಪರಿಸರದಲ್ಲಿ ವಾಸಿಸುವ ಇತರ ಜಲಚರಗಳಿಗೂ ಸಮಸ್ಯೆ ಉಂಟಾಗುತ್ತಿದೆ. ಇಲ್ಲಿನ ಸ್ಥಳೀಯರ ಮಾಹಿತಿಯ ಮೇರೆಗೆ ಅನೇಕ ಮೀನುಗಳು ಸ್ಪೋಟದ ತೀವ್ರತೆಯಿಂದ ಛಿದ್ರಗೊಂಡು ಮೀನುಗಾರರ ಕೈಗೆ ದೊರಕಿದೆ ಹಾಗೂ ಹರಿಯುವ ನೀರಿನಲ್ಲಿ ತೇಲಿ ಹೋಗಿ ನೀರನ್ನು ಕಲುಷಿತ ಮಾಡಿದೆ ಎಂದು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!