Tuesday, May 21, 2024
Homeಕರಾವಳಿಬೆಳ್ತಂಗಡಿ : ಅಕ್ರಮ ಮರ ಸಾಗಾಟವನ್ನು ಪತ್ತೆ ಹಚ್ಚಿದ ಅರಣ್ಯ ಇಲಾಖೆ: 7.7 ಲಕ್ಷ ಮೌಲ್ಯದ...

ಬೆಳ್ತಂಗಡಿ : ಅಕ್ರಮ ಮರ ಸಾಗಾಟವನ್ನು ಪತ್ತೆ ಹಚ್ಚಿದ ಅರಣ್ಯ ಇಲಾಖೆ: 7.7 ಲಕ್ಷ ಮೌಲ್ಯದ ಮರ & ವಾಹನಗಳು ವಶಕ್ಕೆ: ಮೂವರ ಬಂಧನ

spot_img
- Advertisement -
- Advertisement -

ಬೆಳ್ತಂಗಡಿ : ಲಾರಿಯಲ್ಲಿ ಬೆಂಗಾವಲು ವಾಹನಗಳ ಜೊತೆ ಅಕ್ರಮವಾಗಿ ಮರ ಸಾಗಾಟ ಮಾಡುತ್ತಿದ್ದನ್ನು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಗಳ ತಂಡ ಪತ್ತೆ ಹಚ್ಚಿ ವಶಪಡಿಸಿಕೊಂಡು ವಾಹನದಲ್ಲಿದ್ದ ಮೂವರನ್ನು ಬಂಧಿಸಲಾಗಿದೆ‌, ಉಳಿದವರು ಪರಾರಿಯಾಗಿದ್ದಾರೆ.

ಬೆಳ್ತಂಗಡಿ ತಾಲೂಕಿನ ಮೋಗ್ರು ಗ್ರಾಮದ ಮುಗೇರಡ್ಕ ಎಂಬಲ್ಲಿ ಜ.30 ರಂದು ರಾತ್ರಿ ಸುಮಾರು 2:30 ರ ಸಮಯಕ್ಕೆ ಮುಗೇರಡ್ಕ ಕಚ್ಚಾ ರಸ್ತೆಯಲ್ಲಿ ಅಕ್ರಮವಾಗಿ ಹೆಬ್ಬಲಸು ,ಮಾವು ಹಾಗೂ ಕಾಡು ಜಾತಿಯ ದಿಮ್ಮಿಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನಲೆಯಲ್ಲಿ ಉಪ್ಪಿನಂಗಡಿ ಅರಣ್ಯ ಇಲಾಖೆ ತಂಡ ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ.

ಟಾಟಾ ಕಂಪನಿಯ ಲಾರಿ ನೋಂದಣಿ ಸಂಖ್ಯೆ KA-13-A-2102 ಹಾಗೂ ಬೆಂಗಾವಲಾಗಿ ಬರುತ್ತಿದ್ದ ಸ್ಕೂಟರ್ ಗಳಾದ KA-21-7581 ಹಾಗೂ ಮೂರು ಮೋಟಾರು KA-21-Y-6102, KA-21-Y-2658, KA-21-Y-0537 ವಾಹನಗಳು  ಹಾಗೂ 26 ಮರದ ದಿಮ್ಮಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೂವರು ಆರೋಪಿಗಳಾದ ಪಾಣೆ ಮಂಗಳೂರು ನಿವಾಸಿ‌ ಪಕ್ರುದ್ದಿನ್ ಮಗನಾದ ಅಬ್ಬಾಸ್, ಮರ್ದಾಳ ನಿವಾಸಿ ಶೇಖ್ ಖಾಸಿಂ ಮಗನಾದ ಇರ್ಫಾನ್, ಮರ ಕಡಿದ ಜಾಗದ ವಾರಿಸುದಾರರಾದ ಮೋಗ್ರು ಗ್ರಾಮದ ಪರಮೇಶ್ವರ ಕ್ಷೌರಿಕ ಕೃಷ್ಣಪ್ಪ ಕ್ಷೌರಿಕ ಎಂಬವರನ್ನು ಬಂಧಿಸಲಾಗಿದೆ.ಉಳಿದ ಆರೋಪಿಗಳಾದ ಕಡಬದ ಆಶ್ರಫ್, ಇಳಂತಿಲದ ರಹಮಾನ್‌ , ಲಾರಿ ಚಾಲಕ ಪಾಣೆ ಮಂಗಳೂರಿನ ಅಶ್ರಫ್ ಪರಾರಿಯಾಗಿದ್ದಾರೆ. ವಶಪಡಿಸಿಕೊಂಡ ಮರದ ದಿಮ್ಮಿಗಳ ಒಟ್ಟು ಮೌಲ್ಯ 2.7 ಲಕ್ಷ ಮತ್ತು ವಾಹನಗಳ ಮೌಲ್ಯ 5 ಲಕ್ಷ ರೂಪಾಯಿ ಒಟ್ಟು 7.7 ಲಕ್ಷ ರೂಪಾಯಿ ಮೌಲ್ಯದ ಸುತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.

ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್. ಕೆ.ಕೆ ಮಾರ್ಗದರ್ಶನದಲ್ಲಿ  ಬಂದಾರು ಶಾಖಾ ಉಪ ವಲಯ ಅರಣ್ಯಾಧಿಕಾರಿ ಜೆರಾಲ್ಡ್ ಡಿ’ಸೋಜಾ, ಗಸ್ತು ಅರಣ್ಯ ಪಾಲಕರಾದ  ಜಗದೀಶ್.ಕೆ.ಎನ್, ಪ್ರಶಾಂತ್ ಮಾಳಗಿ, ಎಮ್.ಎಮ್.ಜಗದೀಶ್, ಅರಣ್ಯ ವೀಕ್ಷಕರಾದ ರವಿ ಮತ್ತು ಸೇಸಪ್ಪ ಗೌಡ, ಚಾಲಕ ಕಿಶೋರ್‌ ಕುಮಾರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

- Advertisement -
spot_img

Latest News

error: Content is protected !!