Saturday, June 27, 2026
Homeಕರಾವಳಿಬೆಳ್ತಂಗಡಿ : ನೀರಚಿಲುಮೆಯಲ್ಲಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ನಿರ್ಮಾಣವಾದ ಬಸ್ ನಿಲ್ದಾಣವನ್ನು ಉದ್ಘಾಟಿಸಿದ...

ಬೆಳ್ತಂಗಡಿ : ನೀರಚಿಲುಮೆಯಲ್ಲಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ನಿರ್ಮಾಣವಾದ ಬಸ್ ನಿಲ್ದಾಣವನ್ನು ಉದ್ಘಾಟಿಸಿದ ಶಾಸಕ ಹರೀಶ್ ಪೂಂಜ

- Advertisement -
- Advertisement -

ಬೆಳ್ತಂಗಡಿ : ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಕಲ್ಮಂಜ ವತಿಯಿಂದ ಸ್ವಾತಂತ್ರ್ಯ ವೀರ,ಸಂಘಟನಾ ಚತುರ ಕೆದಂಬಾಡಿ ರಾಮಯ್ಯ ಗೌಡರ ಸ್ಮರಣಾರ್ಥ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ನಿರಚಿಲುಮೆಯಲ್ಲಿ ನಿರ್ಮಿಸಿದ ಬಸ್ ನಿಲ್ದಾಣವನ್ನು ಶಾಸಕರಾದ ಹರೀಶ್ ಪೂಂಜ ಉದ್ಘಾಟಿಸಿದರು.

ಈ ಬಸ್ ನಿಲ್ದಾಣ ನೀರಚಿಲುಮೆಯಿಂದ ಉಜಿರೆ ಕಡೆ ಸಂಚರಿಸುವ ಪ್ರಯಾಣಿಕರ ಬಹು ವರ್ಷಗಳ ಬೇಡಿಕೆ ಇದಾಗಿತ್ತು.ಇದನ್ನು ಮನಗಂಡ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಕಲ್ಮಂಜದಲ್ಲಿ  ಬಸ್ ನಿಲ್ದಾಣ ನಿರ್ಮಾಣ ಮಾಡಿದ್ದಾರೆ.

 ಇನ್ನು ಕಾರ್ಯಕ್ರಮದಲ್ಲಿ ಬಸವರಾಜ್ ಬೆಂಗಳೂರು,ಗೌಡರ ಯಾನೆ ಒಕ್ಕಲಿಗರ ಸಂಘದ ಅಧ್ಯಕ್ಷರಾದ ರಾಘವ ಗೌಡ,ಗೌರವಾಧ್ಯಕ್ಷರಾದ ರಮೇಶ್ ಗೌಡ,ಉಪಾಧ್ಯಕ್ಷರಾದ ಸುಂದರ ಗೌಡ,ಮಹಿಳಾ ವೇದಿಕೆಯ ಅಧ್ಯಕ್ಷರಾದ ವಿಮಲ ಗೌಡ,ವಾಣಿ ಸೌಹಾರ್ದ ಕೊ ಆಪರೇಟಿವ್ ಸೊಸೈಟಿ ಬ್ಯಾಂಕ್ ನ ನಿರ್ದೇಶಕರಾದ ಗೋಪಾಲಕೃಷ್ಣ ಗುಲ್ಲೋಡಿ,ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಬೆಳ್ತಂಗಡಿ ಯುವ ವೇದಿಕೆ ಅಧ್ಯಕ್ಷರಾದ ಯಶವಂತ್ ಗೌಡ ಬೆಳಾಲು, ಪಜಿರಡ್ಕ ದೇವಸ್ಥಾನದ ಅಧ್ಯಕ್ಷರಾದ ಕೃಷ್ಣಪ್ಪ ಗುಡಿಗಾರ್ ಅಲೆಕ್ಕಿ, ಬೆಳ್ತಂಗಡಿ ಪುರೋಹಿತ ಪರಿಷತ್ ನ ಅಧ್ಯಕ್ಷರಾದ ರವಿ ಭಟ್, ಸಚಿನ್ ಗೌಡ ಕಲ್ಮಂಜ ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು,

- Advertisement -

Latest News

error: Content is protected !!