Friday, May 17, 2024
Homeಅಪರಾಧಧರ್ಮಸ್ಥಳ : BSNL ಕಟ್ಟಡದಿಂದ ಬ್ಯಾಟರಿ ಕಳ್ಳತನ ಪ್ರಕರಣ, ಕೇರಳದಲ್ಲಿ ಆರೋಪಿಯನ್ನು ಬಂಧಿಸಿದ ಧರ್ಮಸ್ಥಳ ಪೊಲೀಸರು

ಧರ್ಮಸ್ಥಳ : BSNL ಕಟ್ಟಡದಿಂದ ಬ್ಯಾಟರಿ ಕಳ್ಳತನ ಪ್ರಕರಣ, ಕೇರಳದಲ್ಲಿ ಆರೋಪಿಯನ್ನು ಬಂಧಿಸಿದ ಧರ್ಮಸ್ಥಳ ಪೊಲೀಸರು

spot_img
- Advertisement -
- Advertisement -

ಧರ್ಮಸ್ಥಳ: ಧರ್ಮಸ್ಥಳ ಗ್ರಾಮದ ಕಲ್ಲೇರಿಯಲ್ಲಿರುವ ಬಿ.ಎಸ್.ಎನ್.ಎಲ್ ಕಟ್ಟಡದಲ್ಲಿ ಇತ್ತೀಚಿಗೆ ಜರುಗಿದ ಬ್ಯಾಟರಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಕೇರಳದಲ್ಲಿ ಪತ್ತೆ ಹಚ್ಚಿ ಆರೋಪಿತನಿಂದ 80 ಸಾವಿರ ಮೌಲ್ಯದ ಬ್ಯಾಟರಿ ವಶಕ್ಕೆ ಪಡೆಯುವಲ್ಲಿ ಧರ್ಮಸ್ಥಳ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಇಟ್ಟೆಪಣಿಕ್ಕರ್

ಕೇರಳ ರಾಜ್ಯದ ಕೊಲ್ಲಂ ಜಿಲ್ಲೆಯ ಕೊಟ್ಟಾರಕರ ತಾಲೂಕಿನ ಎಯುಕೋನ್ ಗ್ರಾಮದ ಜೆನಿಭವನ್ ನಿವಾಸಿ ಮಾದ್ರೂ ಪಣಿಕ್ಕರ್ ಅವರ ಮಗನಾದ ಇಟ್ಟೆಪಣಿಕ್ಕರ್ (57) ಬಂಧಿತ ಆರೋಪಿ.

ಏನಿದು ಪ್ರಕರಣ ?
ಕಲ್ಲೇರಿಯಲ್ಲಿರುವ BSNL ಸೇರಿದ ಕಟ್ಟಡದಲ್ಲಿ ಉಪಯೋಗಕ್ಕೆ ಬಾರದೇ ಇದ್ದ ಬ್ಯಾಟರಿಗಳನ್ನು ಯಾರೋ ಕಳ್ಳರು ಅಂದಾಜು ಜ.14 ರಿಂದ ಜ.16 ರ ಸಮಯದಲ್ಲಿ ಕಟ್ಟಡದ ಬಾಗಿಲು ಬೀಗವನ್ನು ಮುರಿದು ಸುಮಾರು 80 ಸಾವಿರ ಮೌಲ್ಯದ 16 ಎಕ್ಸೆಡ್ 1000 ಎ.ಹೆಚ್ ಬ್ಯಾಟರಿಗಳನ್ನು ಕಳ್ಳತನ ಮಾಡಿದ್ದರು. ಈ ಕುರಿತು BSNL
ನ ಕಿರಿಯ ದೂರ ಸಂಪರ್ಕ ಅಧಿಕಾರಿ ಆಶಾ.ಡಿ ಧರ್ಮಸ್ಥಳ ಪೊಲೀಸ್ ಠಾಣೆಗೆ ನೀಡಿದ ದೂರಿನಂತೆ ಪ್ರಕರಣ ದಾಖಲಿಸಲಾಗಿತ್ತು.

ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್.ಡಿ ತಂಡದವರು ತಾಂತ್ರಿಕ ದಾಖಲೆಗಳ ಮೂಲಕ ಕಾರ್ಯಾಚರಣೆ ನಡೆಸಿ ಆರೋಪಿ ಕೇರಳ ರಾಜ್ಯದ ಕೊಲ್ಲಂ ಜಿಲ್ಲೆಯ ಕೊಟ್ಟಾರಕರ ತಾಲೂಕಿನ ಎಯುಕೋನ್ ಗ್ರಾಮದ ಜೆನಿಭವನ್ ನಿವಾಸಿ ಮಾದ್ರೂ ಪಣಿಕ್ಕರ್ ಅವರ ಮಗನಾದ ಇಟ್ಟೆಪಣಿಕ್ಕರ್ (57) ನನ್ನು ಬಂಧಿಸಿದ್ದರು. ಕಳವು ಮಾಡಿದ್ದ ಸುಮಾರು 80 ಸಾವಿರ ಮಾಲ್ಯದ ಬ್ಯಾಟರಿಗಳನ್ನು ಪತ್ತೆಹಚ್ಚಿ ವಶಪಡಿಸಿಕೊಂಡು ಆರೋಪಿಯನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

ಈ ಪ್ರಕರಣದಲ್ಲಿ ಧರ್ಮಸ್ಥಳ ಪೊಲೀಸ್‌ ಠಾಣಾ ಸಬ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್.ಡಿ ರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ರಾಜೇಶ್,ಪ್ರಶಾಂತ್, ಸತೀಶ ನಾಯ್ಕ ಜಿ,ಲಾರೆನ್ಸ್ ಪಿ.ಆರ್, ಮಹಮ್ಮದ್ ಅಸ್ಲಾಂ, ಮಲ್ಲಿಕಾರ್ಜುನ, ಹರೀಶ್ ಕೆ ಎಂ ಮತ್ತು ಚಾಲಕರಾದ ಲೊಕೇಶ್ ರವರುಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

- Advertisement -
spot_img

Latest News

error: Content is protected !!