Friday, June 26, 2026
Homeಕರಾವಳಿಮಂಗಳೂರುಮನೆಯೊಳಗೆ ಅಕ್ರಮವಾಗಿ ಗಾಂಜಾ ದಾಸ್ತಾನು; ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಮನೆಯೊಳಗೆ ಅಕ್ರಮವಾಗಿ ಗಾಂಜಾ ದಾಸ್ತಾನು; ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

- Advertisement -
- Advertisement -

ಬೆಳ್ತಂಗಡಿ : ಅಕ್ರಮವಾಗಿ ಕಟ್ಟಡದೊಳಗೆ ದಾಸ್ತಾನು ಇರಿಸಿದ್ದ ಗಾಂಜಾವನ್ನು ಪುಂಜಾಲಕಟ್ಟೆ ಪೊಲೀಸರು ದಾಳಿ ಮಾಡಿ ಶೇಖರಿಸಿಟ್ಟ ಗಾಂಜಾವನ್ನು ಪತ್ತೆಹಚ್ಚಿ ಹೆಚ್ಚಿದ್ದು.ದಾಳಿ ವೇಳೆ ಆರೋಪಿ ಪರಾರಿಯಾಗಿದ್ದಾನೆ‌. ಹೆಚ್ಚಿನ ತನಿಖೆಗಾಗಿ ಬೆಳ್ತಂಗಡಿ ಪೊಲೀಸರಿಗೆ ಪ್ರಕರಣ ಹಸ್ತಾಂತರಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಮದಡ್ಕ ಚಿಲಿಂಬಿ ಎಂಬಲ್ಲಿ ರಫೀಕ್ ಎಂಬಾತನ ಮನೆಯೊಳಗೆ 160 ಗ್ರಾಂ ಗಾಂಜಾ ಶೇಖರಿಸಿಟ್ಟ ಬಗ್ಗೆ ಪುಂಜಾಲಕಟ್ಟೆ ಪಿಎಸ್ಐ ಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಗಾಂಜಾ ವಶಕ್ಕೆ ಪಡೆದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ8C,20B NDPS Act ಅಡಿಯಲ್ಲಿ ಆರೋಪಿ ರಫೀಕ್ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿ ರಫೀಕ್ ವಿರುದ್ಧ ಈ ಹಿಂದೆ ಹಲವು ಗಾಂಜಾ ಪ್ರಕರಣ ದಾಖಲಾಗಿದೆ.

ಪ್ರಕರಣ: ಆಗಸ್ಟ್ 03 ರಂದು 06:45 ಗಂಟೆಗೆ ಪುಂಜಾಲಕಟ್ಟೆ ಪಿಎಸ್ಐ ರಾಜೇಶ್.ಕೆ.ವಿ ಸಿಬ್ಬಂದಿಗಳೊಂದಿಗೆ ಪಣಕಜೆ ಎಂಬಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ದೊರೆತ ಖಚಿತ ಮಾಹಿತಿಯಂತೆ ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಮದ್ದಡ್ಕ ಚಿಲಿಂಬಿ ಎಂಬಲ್ಲಿ ನಿರ್ಮಾಣ ಹಂತದ ಛಾವಣಿ ಇಲ್ಲದ ಕಟ್ಟಡದೊಳಗಡೆ ರಫೀಕ್ ಎಂಬಾತನು ಅಕ್ರಮವಾಗಿ ಸುಮಾರು ರೂ.15,000 ಮೌಲ್ಯದ  ಒಟ್ಟು 160 ಗ್ರಾಂ ತೂಕದ ಗಾಂಜಾದ ಎಲೆ ಮೊಗ್ಗು, ಬೀಜವನ್ನು  ತಂದಿಟ್ಟಿದ್ದನ್ನು   ಮಾನ್ಯ ತಹಶೀಲ್ದಾರರು ಬೆಳ್ತಂಗಡಿ ಹಾಗೂ ಪಂಚರ ಸಮಕ್ಷಮ ವಿವರವಾದ ಮಹಜರು ನಡೆಸಿ ವಶಪಡಿಸಿಕೊಂಡು ಬೆಳ್ತಂಗಡಿ ಠಾಣಾ ಸರಹದ್ದಿನ ಆಧಾರದಲ್ಲಿ ಮಹಜರು ಹಾಗೂ ವರದಿಯನ್ನು ಮುಂದಿನ ಕ್ರಮದ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.

- Advertisement -

Latest News

error: Content is protected !!