Saturday, May 4, 2024
Homeಕರಾವಳಿಬೆಳ್ತಂಗಡಿ: ಅಕ್ರಮ ಮದ್ಯ ಸಾಗಾಟ ಪತ್ತೆ ಹಚ್ಚಿದ ಅಬಕಾರಿ ಅಧಿಕಾರಿಗಳು

ಬೆಳ್ತಂಗಡಿ: ಅಕ್ರಮ ಮದ್ಯ ಸಾಗಾಟ ಪತ್ತೆ ಹಚ್ಚಿದ ಅಬಕಾರಿ ಅಧಿಕಾರಿಗಳು

spot_img
- Advertisement -
- Advertisement -

ಬೆಳ್ತಂಗಡಿ: ತಾಲೂಕಿನ ಉಜಿರೆ ಗ್ರಾಮದ ಮಾಲ್ತಡ್ಕ‌ ಎಂಬಲ್ಲಿ ಅಪೆ ರಿಕ್ಷಾದಲ್ಲಿ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯ ಮಾರಾಟ ಮಾಡಲು ಸಾಗಾಟ ‌ಮಾಡುತ್ತಿದ್ದ ಬಗ್ಗೆ ಬೆಳ್ತಂಗಡಿ ಅಬಕಾರಿ ಇಲಾಖೆಗೆ ದೊರೆತ ಖಚಿತ ಮಾಹಿತಿ ಮೇರೆಗೆ ರಿಕ್ಷಾವನ್ನು ತಡೆದು ನಿಲ್ಲಿಸಿ ಪರಿಶೀಲನೆ ಮಾಡಿದಾಗ 17.280 ಲೀಟರ್ ಮದ್ಯ ರಿಕ್ಷಾದಲ್ಲಿ ದೊರೆತಿದೆ.

ಆಟೋ ರಿಕ್ಷಾವನ್ನು ವಶಪಡಿಸಿಕೊಂಡಿದ್ದು, ಹಾಗೆಯೆ ಮದ್ಯ ಮಾರಾಟ ಮಾಡಲು ಸಾಗಿಸುತ್ತಿದ್ದ ಬೆಳಾಲು ಗ್ರಾಮದ ಹರಿಶ್ಚಂದ್ರ. ಡಿ. ಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಘಟನೆಯಲ್ಲಿ ಆಟೋ ಮಾಲಕ ತಲೆ ಮರೆಸಿಕೊಂಡಿದ್ದು, ಬಂಧನಕ್ಕಾಗಿ ಬಲೆ‌ ಬಿಸಲಾಗಿದೆ.

ವಶಪಡಿಸಿಕೊಳ್ಳಲಾದ ಒಟ್ಟು ಮೌಲ್ಯ 1,07,000/- ಅಗಿದ್ದು, ಪ್ರಕರಣವನ್ನು ಬೆಳ್ತಂಗಡಿ ವಲಯದ ಅಬಕಾರಿ ನಿರೀಕ್ಷಕರಾದ ಶ್ರೀಮತಿ ಸೌಮಲತಾ.ಎನ್ ಪ್ರಕರಣ‌ ದಾಖಲಿಸಿಕೊಂಡಿದ್ದಾರೆ.

ಜಿಲ್ಲಾ ಅಬಕಾರಿ ಉಪ ಆಯುಕ್ತರಾದ ಶ್ರೀಮತಿ ಶೈಲಜಾ.ಎ.ಕೋಟೆ ರವರ ಮಾರ್ಗದರ್ಶನದ ಮೇರೆಗೆ ಬಂಟ್ವಾಳ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರಾದ ಶ್ರೀಮತಿ ಶೋಭಾ.ಕೆ ಅವರ ನೇತೃತ್ವದಲ್ಲಿ ಬೆಳ್ತಂಗಡಿ ವಲಯ ಕಛೇರಿಯ ನಿರೀಕ್ಷಕರಾದ ಸೌಮಲತಾ.ಎನ್ ತಂಡದ ಸಿಬ್ಬಂದಿಗಳಾದ ಸಯ್ಯದ್ ಶಬೀರ್, ಅಬ್ದುಲ್ ಹಮೀದ್.ಕೆ, ಶಿವಶಂಕ್ರಪ್ಪ ,ರವಿಚಂದ್ರ ಬೂದಿಹಾಳ ,ಚಾಲಕ ನವೀನ್ ಕುಮಾರ್. ಪಿ ಕಾರ್ಯಾಚರಣೆ ಭಾಗವಹಿಸಿದರು.

- Advertisement -
spot_img

Latest News

error: Content is protected !!