Thursday, June 4, 2026
Homeಉತ್ತರ ಕನ್ನಡಕಾರವಾರದಲ್ಲಿ ಅಕ್ರಮ ಗೋವಾ ಸ್ಪಿರಿಟ್ ವಶ

ಕಾರವಾರದಲ್ಲಿ ಅಕ್ರಮ ಗೋವಾ ಸ್ಪಿರಿಟ್ ವಶ

- Advertisement -
- Advertisement -

ಕಾರವಾರ: ಅಕ್ರಮವಾಗಿ ಸಾಗಿಸುತ್ತಿದ್ದ ಗೋವಾ ಸ್ಪಿರಿಟ್ ಜಪ್ತಿ ಮಾಡಲಾಗಿದ್ದು, ಅಂದಾಜು 2625 ಲೀಟರ್ ಅಕ್ರಮ ಸ್ಪಿರಿಟ್ ವಶಕ್ಕೆ ಪಡೆಯಲಾಗಿದೆ.

1 ಲಕ್ಷ 80 ಸಾವಿರ ರೂಪಾಯಿ ಮೌಲ್ಯದ ಸ್ಪಿರಿಟ್ ಅಬಕಾರಿ ಇಲಾಖೆ ವಶಕ್ಕೆ ಪಡೆದಿದ್ದು, ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಮಾಜಾಳಿ ಬಳಿ ಘಟನೆ ನಡೆದಿದೆ.

ಗೋವಾದಿಂದ ಕೇರಳಕ್ಕೆ ವಾಷಿಂಗ್ ಮೆಷಿನ್ ಸಾಗಿಸುವ ಲಾರಿಯಲ್ಲಿ ಅಕ್ರಮವಾಗಿ ಸ್ಪಿರಿಟ್ ಇರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅಬಕಾರಿ ಇಲಾಖೆ ದಾಳಿ ನಡೆಸಿದೆ.

ಲಾರಿಯಲ್ಲಿ 10 ವಾಷಿಂಗ್ ಮೆಷಿನ್ ಮಧ್ಯದಲ್ಲಿ ಇರಿಸಿ ಸಾಗಿಸಲಾಗುತ್ತಿದ್ದು, ಲಾರಿ, ವಾಷಿಂಗ್ ಮೆಷಿನ್ ಕೂಡಾ ವಶಕ್ಕೆ ಪಡೆಯಲಾಗಿದೆ. ಕಾರವಾರ ಅಬಕಾರಿ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!