Sunday, May 19, 2024
Homeಕರಾವಳಿಉಡುಪಿಹಿರಿಯಡ್ಕ: ವೈದ್ಯರ ಸೋಗಿನಲ್ಲಿ ಬಂದು ವಂಚನೆ, ಬಡ ಕುಟುಂಬ ನ್ಯಾಯಕ್ಕಾಗಿ ಪರದಾಟ !

ಹಿರಿಯಡ್ಕ: ವೈದ್ಯರ ಸೋಗಿನಲ್ಲಿ ಬಂದು ವಂಚನೆ, ಬಡ ಕುಟುಂಬ ನ್ಯಾಯಕ್ಕಾಗಿ ಪರದಾಟ !

spot_img
- Advertisement -
- Advertisement -

ಉಡುಪಿ: ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಕುಕ್ಕೆಹಳ್ಳಿಯಲ್ಲಿ ಆರೋಗ್ಯ ಇಲಾಖೆಯಿಂದ ನಿಯೋಜಿತವಾಗಿರುವ ಸರ್ಕಾರಿ ವೈದ್ಯರೆಂದು ಹೇಳಿಕೊಂಡ ಇಬ್ಬರು ವ್ಯಕ್ತಿಗಳು, ದಂಪತಿಯನ್ನು ವಂಚಿಸಿರುವ ಆಘಾತಕಾರಿ ಘಟನೆ ನಡೆದಿದೆ. ಎರಡು ತಿಂಗಳಿನಿಂದ ಕುಟುಂಬವು ನ್ಯಾಯಕ್ಕಾಗಿ ಪರದಾಡುತ್ತಿದೆ.

ಕೂಲಿ ಕೆಲಸ ಮಾಡುವ ಸುಬ್ಬಣ್ಣ ಮತ್ತು ಅವರ ಪತ್ನಿ ಬೇಬಿ ಕುಲಾಲ್ ಕಡು ಬಡತನದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಇವರು ಕುಕ್ಕೆಹಳ್ಳಿ ನಿವಾಸಿಗಳು. ಇಬ್ಬರೂ ಅನಕ್ಷರಸ್ಥರಾಗಿದ್ದು, ಒಂಬತ್ತನೇ ತರಗತಿ ಓದುತ್ತಿರುವ ಮಗಳಿದ್ದಾಳೆ. ನಾಲ್ಕು ವರ್ಷಗಳ ಹಿಂದೆ ಮಗುವಿಗೆ ಸ್ತನ ಕ್ಯಾನ್ಸರ್ ಇದೆ ಎಂದು ತಿಳಿದುಬಂದಿತ್ತು. ಹಾಗೇ ಸ್ತನಛೇದನ ಮಾಡಲಾಗಿತ್ತು.

ಫೆಬ್ರವರಿ 5 ರಂದು ಸುಬ್ಬಣ್ಣ ಕೆಲಸಕ್ಕೆ ಹೋಗಿದ್ದಾಗ ಬೇಬಿ ಮನೆಯಲ್ಲಿ ಒಬ್ಬರೇ ಇದ್ದರು. ಮೋಟಾರ್ ಬೈಕ್ ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಆಕೆಯ ಬಳಿ ಬಂದು ಆರೋಗ್ಯ ಇಲಾಖೆಯಿಂದ ನಿಯೋಜಿತ ವೈದ್ಯರು ಎಂದು ಪರಿಚಯಿಸಿಕೊಂಡರು. ಮಗಳಿಗೆ ಮೂರು ಚುಚ್ಚುಮದ್ದು ನೀಡುವಂತೆ ಸೂಚನೆ ನೀಡಿದ್ದು, ಇದರಿಂದ ಆಕೆಗೆ ನೋವು ಮತ್ತು ಕ್ಯಾನ್ಸರ್‌ನಿಂದ ಮುಕ್ತಿ ಸಿಗಲಿದೆ ಎಂದು ಹೇಳಿದರು.

ಸರ್ಕಾರಿ ಫಾರ್ಮಸಿಯಲ್ಲಿ ಚುಚ್ಚುಮದ್ದಿನ ದಾಸ್ತಾನು ಮುಗಿದಿದೆ ಮತ್ತು ಅದರ ವೆಚ್ಚವನ್ನು ಈಗ ಕೊಟ್ಟು ಚುಚ್ಚುಮದ್ದನ್ನು ಪಡೆಯುವಂತೆ ಹೇಳಿ, ಅದನ್ನು ಸರ್ಕಾರವು ನಂತರ ನಿಮಗೆ ಮರುಪಾವತಿಸುತ್ತದೆ ಎಂದು ಹೇಳಿದ್ದಾರೆ.

ಬೇಬಿ ಪತಿಗೆ ದೂರವಾಣಿ ಕರೆ ಮಾಡಿ ಇದರ ಬಗ್ಗೆ ತಿಳಿಸಿದರು. ಮನೆಗೆ ಧಾವಿಸಿ ಸಾಲ ಮಾಡಿ 18,000/- ರೂ ಬಂದವರಿಗೆ ಕೊಟ್ಟರು. ಅಪರಿಚಿತರು ಅದೇ ದಿನ ಚುಚ್ಚುಮದ್ದನ್ನು ನೀಡುವುದಾಗಿ ಭರವಸೆ ನೀಡಿ ಅಲ್ಲಿಂದ ತೆರಳಿದರು.

ಘಟನೆಯ ಬಗ್ಗೆ ದಂಪತಿಗಳು ತಮ್ಮ ಕುಟುಂಬ ವೈದ್ಯೆ ಡಾ.ಸುಮಾ ಶಶಿಕಿರಣ್ ಶೆಟ್ಟಿ ಅವರಿಗೆ ತಿಳಿಸಿದ್ದಾರೆ. ಅಪರಿಚಿತರು ನೀಡಿದ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಮಾತುಕತೆ ನಡೆಸಿದಾಗ ಅವರು ವೈದ್ಯರಲ್ಲ ಎಂದು ತಿಳಿದು ಬಂದಿದೆ. ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಂದ ವಂಚಕರು ರೋಗಿಗಳ ಬಗ್ಗೆ ಮಾಹಿತಿ ಪಡೆಯುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!