Saturday, June 6, 2026
Homeಅಪರಾಧಕಾಸರಗೋಡು : ಮಾದಕ ವಸ್ತು ಸಾಗಾಟ; ಬೈಕ್ ಸಹಿತ ಇಬ್ಬರು ಆರೋಪಿಗಳ ಬಂಧನ!

ಕಾಸರಗೋಡು : ಮಾದಕ ವಸ್ತು ಸಾಗಾಟ; ಬೈಕ್ ಸಹಿತ ಇಬ್ಬರು ಆರೋಪಿಗಳ ಬಂಧನ!

- Advertisement -
- Advertisement -

ಕಾಸರಗೋಡು : ಅಕ್ರಮವಾಗಿ ಬೈಕ್ ಗಳಲ್ಲಿ ಸಾಗಾಟ ಮಾಡುತ್ತಿದ್ದ ಮಾದಕ ವಸ್ತುಗಳನ್ನು ಅಬಕಾರಿ ಇಲಾಖೆ ಸಿಬ್ಬಂದಿಗಳು ವಶಪಡಿಸಿಕೊಂಡ ಘಟನೆ ಕಾಸರಗೋಡಿನ ಪೈವಳಿಕೆ ಎಂಬಲ್ಲಿ ನಡೆದಿದೆ.

ಪೈವಳಿಕೆ ಬಾಯಿಕಟ್ಟೆಯ ನಿವಾಸಿ ಮುಹಮ್ಮದ್ ಸಮೀರ್ (22) ಮತ್ತು ಮುಹಮ್ಮದ್ ರಿಯಾಝ್ (28) ಬಂಧಿತ ಆರೋಪಿಗಳು. ಸಮೀರ್ ಸಂಚರಿಸುತ್ತಿದ್ದ ಬೈಕ್ ನಿಂದ 51 ಗ್ರಾಂ ಎಂ. ಡಿ.ಎಂ . ಎ ಮಾದಕ ವಸ್ತು ಹಾಗೂ ರಿಯಾಝ್ ಚಲಾಯಿಸುತ್ತಿದ್ದ ಬೈಕ್ ನಿಂದ 3 ಕಿಲೋ 100 ಗ್ರಾಂ ಗಾಂಜಾ ವನ್ನು ವಶಪಡಿಸಿಕೊಳ್ಳಲಾಗಿದೆ.

ಕಾಸರಗೋಡು ಅಬಕಾರಿ ಇಲಾಖೆಗೆ ಲಭಿಸಿದ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸ ಲಾಗಿದ್ದು, ಪೈವಳಿಕೆ ಬಾಯಿಕಟ್ಟೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಈ ದಾರಿಯಾಗಿ ಬಂದ ಬೈಕ್ ಗಳನ್ನು ತಪಾಸಣೆ ನಡೆಸಿದಾಗ ಮಾದಕ ವಸ್ತು ಪತ್ತೆಯಾಗಿದೆ.

- Advertisement -

Latest News

error: Content is protected !!