Saturday, May 18, 2024
Homeಕರಾವಳಿಲವ್ ಜೀಹಾದ್ ಮತಾಂತರದ ಬಗ್ಗೆ ಕಿಡಿಕಾರಿ ವಿವಾದಕ್ಕೆ ಸಿಲುಕಿದ ಚೈತ್ರಾ ಕುಂದಾಪುರ!

ಲವ್ ಜೀಹಾದ್ ಮತಾಂತರದ ಬಗ್ಗೆ ಕಿಡಿಕಾರಿ ವಿವಾದಕ್ಕೆ ಸಿಲುಕಿದ ಚೈತ್ರಾ ಕುಂದಾಪುರ!

spot_img
- Advertisement -
- Advertisement -

ಮಂಗಳೂರು: ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ವಿವಾದಾತ್ಮಕ ಭಾಷಣ ಮಾಡಿದ್ದು, ಸೋಮವಾರ ಸಂಜೆ ಮಂಗಳೂರು ನಗರ ಹೊರವಲಯದ ಸುರತ್ಕಲ್‌ನಲ್ಲಿ ಭಜರಂಗದಳ ಮತ್ತು ದುರ್ಗಾವಾಹಿನಿಯ ವತಿಯಿಂದ ನಡೆದ ಹಿಂದೂ ಜನಜಾಗೃತಿ ಸಮಾವೇಶದಲ್ಲಿ ಚೈತ್ರ ಕುಂದಾಪುರ ಆಕ್ರೋಶಭರಿತ ಮಾತುಗಳನ್ನಾಡಿದ್ದಾರೆ.

ಬಜರಂಗ ದಳ, ದುರ್ಗಾ ವಾಹಿನಿಯಿಂದ ಸುರತ್ಕಲ್ ನಲ್ಲಿ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, “ಮುಸ್ಲಿಮರು ಲವ್ ಜಿಹಾದ್ ನಿಲ್ಲಿಸಬೇಕು.ಇಲ್ಲವಾದಲ್ಲಿ ಶೇ 70ರಷ್ಟು ಇರುವ ಹಿಂದೂಗಳು, ಮುಸ್ಲಿಂ ಹೆಣ್ಣು ಮಕ್ಕಳನ್ನು ಮತಾಂತರ ಮಾಡೋಕೆ ಎರಡು ದಿನ ಸಾಕು. ಭಜರಂಗದಳದ ಕಾರ್ಯಕರ್ತರು ಮುಸ್ಲಿಂ ಹೆಣ್ಣು ಮಕ್ಕಳನ್ನು ಲವ್ ಮಾಡೋಕೆ ಹೊರಟರೆ, ಮುಸ್ಲಿಮರ ಮನೆಯಲ್ಲಿ ಬುರ್ಖಾ ಕಾಣೋದಿಲ್ಲ. ಪ್ರತೀ ಮನೆಯ ಮುಸ್ಲಿಂ ಹೆಣ್ಣುಮಕ್ಕಳ ಹಣೆಗೆ ಕುಂಕುಮ ಇಟ್ಟು ಕರೆದುಕೊಂಡು ಬರುತ್ತೇವೆ” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

“ಬಜರಂಗದಳದ ಕಾರ್ಯಕರ್ತರು ಅಲೆಮಾರಿಗಳು ಮತ್ತು ಪುಡಿ ರೌಡಿಗಳು ಎಂಬ ಟೀಕೆಗಳನ್ನು ನಾವು ಕೇಳುತ್ತಲೇ ಇದ್ದೇವೆ. ಆದರೆ ಸಂಘಟನೆಯ ಕಾರ್ಯಕರ್ತರು ತಮ್ಮ ತಾಯ್ನಾಡಿನ ರಕ್ಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕೋವಿಡ್ 19 ಸೋಂಕಿನ ಕಷ್ಟದ ಸಮಯದಲ್ಲಿ ಅನೇಕರಿಗೆ ಸಹಾಯ ಮಡಿದ್ದಾರೆ. ಭಜರಂಗದಳದ ಕಾರ್ಯಕರ್ತರು ಎಂದಿಗೂ ಗಾಂಜಾ ಅಥವಾ ಇನ್ನಿತರ ಚಟುವಟಿಕೆಗಳಲ್ಲಿ ತೊಡಗಿಕೊಂಡಿಲ್ಲ. ಅವರ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಇರಿ” ಎಂದಿದ್ದಾರೆ.

“ಹಿಂದೂ ಸಮಾಜದ ಹೆಣ್ಣು ಮಕ್ಕಳನ್ನು ರಕ್ಷಣೆ ಮಾಡೋಕೆ ಗೊತ್ತು. ಅದೇ ರೀತಿ ನಿಮ್ಮ ಮನೆಯ ಹೆಣ್ಣು ಮಕ್ಕಳನ್ನು ಕರೆದುಕೊಂಡು ಬರೋಕೂ ಗೊತ್ತು” ಎಂದು ಚೈತ್ರಾ ಕುಂದಾಪುರ ಬಹಿರಂಗ ಸವಾಲು ಹಾಕಿದ್ದಾರೆ.

ವಿಶ್ವ ಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಮಾತನಾಡಿ, “ಡ್ರಗ್ಸ್ ಮತ್ತು ಲವ್ ಜಿಹಾದ್, ಧಾರ್ಮಿಕ ಧರ್ಮಾಂಧರ ವಿರುದ್ಧ ನಮ್ಮ ಸಂಘಟನೆಗಳು ಹೋರಾಡುತ್ತವೆ. ವಾಹನಗಳನ್ನು ಅಡ್ಡಗಟ್ಟಿದ ನಂತರ ನಾವು ಎಂದಿಗೂ ನೈತಿಕ ಪೊಲೀಸ್ ಗಿರಿ ಅಥವಾ ಜನರ ಮೇಲೆ ದಾಳಿ ನಡೆಸಲಿಲ್ಲ. ಡ್ರಗ್ಸ್ ಹಾಗೂ ಲವ್ ಜಿಹಾದ್ ಅನ್ನು ಕರಾವಳಿ ಕರ್ನಾಟಕದಿಂದ ದೂರವಿಡಲಾಗಿದೆ” ಎಂದರು.

ತುಳು ಅಕಾಡೆಮಿ ಸದಸ್ಯೆ ಶಾಂತಿ ಶೆಟ್ಟಿ ಮಾತನಡಿ, ಹಿಂದೂ ಸಮಾಜವು ಒಟ್ಟಾಗಿ ಧಾರ್ಮಿಕ ಪರಿವರ್ತನೆ ಮತ್ತು ಲವ್ ಜಿಹಾದ್ ವಿರುದ್ಧ ಹೋರಾಡಬೇಕೆಂದು ಕರೆ ನೀಡಿದರು. ಅನೇಕ ಹಿಂದುಗಳು ತಮ್ಮದೇ ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ ಎಂದು ಅವರು ವಿಷಾದಿಸಿದರು.ಮತಾಂತರ ಮತ್ತು ಲವ್ ಜಿಹಾದ್ ನಿಲ್ಲಿಸುವ ಗುರಿಯನ್ನು ಹೊಂದಿರುವ ಕಾನೂನನ್ನು ಬಲಪಡಿಸಲು ಕೋರಿ ರಾಜ್ಯ ಗೃಹ ಸಚಿವರಿಗೆ ತಿಳಿಸಿದ ಪತ್ರವನ್ನು ಶಾಸಕ ವೈ ಭರತ್ ಶೆಟ್ಟಿ ಮೂಲಕ ಹಸ್ತಾಂತರಿಸಲಾಯಿತು.

ಭಜರಂಗದಳ ವಿಭಾಗೀಯ ಸಂಚಾಲಕ ಭುಜಂಗ ಕುಲಾಲ್, ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಗೋಪಾಲ್, ದುರ್ಗಾವಾಹಿನಿ ಜಿಲ್ಲಾ ಸಂಚಾಲಕಿ ಶ್ವೇತಾ, ಮತ್ತು ವಿಶ್ವ ಹಿಂದೂ ಪರಿಷತ್ ಸುರತ್ಕಲ್ ಘಟಕದ ಕಾರ್ಯದರ್ಶಿ ಜಯರಾಮ ಆಚಾರ್ಯ ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!