Thursday, June 4, 2026
Homeಕರಾವಳಿಮಂಗಳೂರು :ಕದ್ರಿ ಪೊಲೀಸ್ ಠಾಣೆಯ ಮುಂಭಾಗವೇ ಯುವಕನೊಬ್ಬನ ಫಸ್ಟ್ ನೈಟ್ ಗೆ ಶುಭ ಕೋರುವ ಬ್ಯಾನರ್...

ಮಂಗಳೂರು :ಕದ್ರಿ ಪೊಲೀಸ್ ಠಾಣೆಯ ಮುಂಭಾಗವೇ ಯುವಕನೊಬ್ಬನ ಫಸ್ಟ್ ನೈಟ್ ಗೆ ಶುಭ ಕೋರುವ ಬ್ಯಾನರ್ ಹಾಕಿದ ಕಿಡಿಗೇಡಿಗಳು

- Advertisement -
- Advertisement -

ಮಂಗಳೂರು :ಕದ್ರಿ ಪೊಲೀಸ್ ಠಾಣೆಯ ಮುಂಭಾಗವೇ ಕಿಡಿಗೇಡಿಗಳು  ಯುವಕನೊಬ್ಬನ ಫಸ್ಟ್ ನೈಟ್ ಗೆ ಶುಭ ಕೋರುವ ಬ್ಯಾನರ್ ಹಾಕಿ ನೋಡುಗರಿಗೆ ಮುಜುಗರ ಉಂಟು ಮಾಡಿದ ಘಟನೆ ನಡೆದಿದೆ.

ಕದ್ರಿ ಪೊಲೀಸ್‌ ಠಾಣೆಯ ಕಂಪೌಂಡ್ ಗೋಡೆಗೆ ತಾಗಿಕೊಂಡಂತೆ ಈ ಬ್ಯಾನರ್ ಹಾಕಲಾಗಿದೆ. ಯುವಕನೊಬ್ಬನ ಮದುವೆಯ ಮೊದಲ ರಾತ್ರಿಯ ಸಂಭ್ರಮ ಎಂದು ಮತ್ತೊಂದು ಹೋರ್ಡಿಂಗ್ಸ್ ಹಾಕಲಾಗಿದೆ. ರಾತ್ರಿಯಿಡೀ ಹೋರಾಡಿ ಗೆದ್ದು ಬಾ ಎಂದು ಗೆಳೆಯರು ಹಾರೈಸಿ ಸರಕಾರಿ ಜಾಗದಲ್ಲಿ ದೊಡ್ಡ ಸಾಧನೆ ಎಂಬಂತೆ ಹೋರ್ಡಿಂಗ್ ಹಾಕಿದ್ದಾರೆ.

ಸರಕಾರಿ ಜಾಗದಲ್ಲಿ ಯಾವುದೇ ಅನುಮತಿ ಇಲ್ಲದೆ ತಮಗೆ ಇಷ್ಟಬಂದಂತೆ ಅಶ್ಲೀಲ ಸಂದೇಶ ಸಾರುವ, ಮುಜುಗರ ತರುವ ಜಾಹೀರಾತು ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

- Advertisement -

Latest News

error: Content is protected !!