Friday, June 26, 2026
Homeಕರಾವಳಿಬೆಳ್ತಂಗಡಿ : ಅಕ್ರಮವಾಗಿ ಬೈಕ್ ನಲ್ಲಿ ಮದ್ಯ ಸಾಗಾಟ: ಪೊಲೀಸ್ ದಾಳಿ ವೇಳೆ ಮದ್ಯ‌ ಹಾಗೂ...

ಬೆಳ್ತಂಗಡಿ : ಅಕ್ರಮವಾಗಿ ಬೈಕ್ ನಲ್ಲಿ ಮದ್ಯ ಸಾಗಾಟ: ಪೊಲೀಸ್ ದಾಳಿ ವೇಳೆ ಮದ್ಯ‌ ಹಾಗೂ ಬೈಕ್  ಬಿಟ್ಟು ಆರೋಪಿ ಪರಾರಿ

- Advertisement -
- Advertisement -

ಬೆಳ್ತಂಗಡಿ : ಗಾಂಧಿ ಜಯಂತಿ ಪ್ರಯುಕ್ತ ಅಮಲು ಪದಾರ್ಥ  ನಿಷೇಧವಿದ್ದರು ಅಕ್ರಮವಾಗಿ ಬೈಕ್ ನಲ್ಲಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಬಗ್ಗೆ ಧರ್ಮಸ್ಥಳ ಪೊಲೀಸರು ಪತ್ತೆ ಹಚ್ಚಿದ್ದು ಆರೋಪಿ ಪರಾರಿಯಾಗೊದ್ದು, ಬೈಕ್ ಮತ್ತು ಮದ್ಯ ವಶಪಡಿಸಿಕೊಳ್ಳಲಾಗಿದೆ.

ಮದ್ಯ ಸಾಗಾಟದ ಬಗ್ಗೆ ಖಚಿತ ಮಾಹಿತಿ ಧರ್ಮಸ್ಥಳ ಪೊಲೀಸರಿಗೆ ಸಿಕ್ಕಿದ್ದು ಅದರಂತೆ ಅಕ್ಟೋಬರ್ 2 ರ ಭಾನುವಾರದಂದು ರಾತ್ರಿ ಸುಮಾರು 9 ಗಂಟೆಗೆ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ಸೀಟು ಎಂಬಲ್ಲಿ ಕಾಯರ್ತೋಡಿ ಮುಳ್ಳಾರು ರಸ್ತೆಯಲ್ಲಿ ಪೊಲೀಸ್ ವಾಹನವನ್ನು ನೋಡಿ ಪಲ್ಸರ್ ಬೈಕ್‌ ಮತ್ತು ಮದ್ಯ ಇರುವ ಚೀಲವನ್ನು ಬಿಟ್ಟು ಪರಾರಿಯಾಗಿದ್ದಾನೆ.

ಇನ್ನೂ ಪಲ್ಸರ್ ಬೈಕ್ ನಲ್ಲಿದ್ದ ಆರೋಪಿ ದೇಜಪ್ಪ ಎಂಬುದಾಗಿ ತಿಳಿದು ಬಂದಿದೆ. ಸ್ಥಳದಲ್ಲಿ ಬಿಟ್ಟು ಹೋದ ಪಲ್ಸರ್ ಬೈಕ್ ಮತ್ತು ಮದ್ಯವನ್ನು ಪಂಚರ ಸಮಕ್ಷಮದಲ್ಲಿ ಪರಿಶೀಲನೆ ಮಾಡಿದಾಗ 26  ಪ್ರೇಸ್ಟೇಜ್ ವಿಸ್ಕಿ ಬಾಟಲಿ ಪತ್ತೆಯಾಗಿದ್ದು ಇದರ ಒಟ್ಟು ಮೌಲ್ಯ 1,826.76 ರೂಪಾಯಿ ಆಗಿದ್ದು ಬೈಕ್ ಬೆಲೆ ಅಂದಾಜು 20,000 ರೂಪಾಯಿ ಆಗಿದೆ. ಆರೋಪಿಯು ಹೆಚ್ಚು ಹಣ ಮಾಡುವ ಉದ್ದೇಶದಿಂದ ಎಲ್ಲಿಂದರಲ್ಲೋ ಮದ್ಯ ಕಡಿಮೆ ದರಕ್ಕೆ ಖರೀದಿ ಮಾಡಿ ಸಾರ್ವಜನಿಕರಿಗೆ ಮಾರಾಟ ಮಾಡಲು ತೆಗೆದುಕೊಂಡು ಹೋಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬಿಸಿದ್ದು ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆಯಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್.ಡಿ ಮತ್ತು ಸಿಬ್ಬಂದಿ ಭಾಗವಹಿಸಿದರು.

- Advertisement -

Latest News

error: Content is protected !!