Saturday, June 6, 2026
Homeಕರಾವಳಿಕಡಬ; ಮನೆಯೊಂದರಲ್ಲಿ ಅಕ್ರಮ ಮದ್ಯ ಮಾರಾಟ; ಪೊಲೀಸರಿಂದ ದಾಳಿ

ಕಡಬ; ಮನೆಯೊಂದರಲ್ಲಿ ಅಕ್ರಮ ಮದ್ಯ ಮಾರಾಟ; ಪೊಲೀಸರಿಂದ ದಾಳಿ

- Advertisement -
- Advertisement -

ಕಡಬ : ಮನೆಯೊಂದರಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆ   ಕಡಬ ಪೊಲೀಸರು ದಾಳಿ ಮಾಡಿ ಮದ್ಯದದ ಬಾಟಲಿ ಸಹಿತ ಆರೋಪಿಯನ್ನು ವಶಕ್ಕೆ ಪಡೆದ ಘಟನೆ ನಡೆದಿದೆ.

ಮರ್ದಾಳ ವ್ಯಾಪ್ತಿಯ ನೆಕ್ಕಿಲಾಡಿ ಗ್ರಾಮದ ರ್ಮಾಯಿ ಕಾಲನಿ ಸಮೀಪ ದಾಳಿ ನಡೆದಿದೆ ಈ ವೇಳೆ ಸುಮಾರು 30ಮದ್ಯದ ಪ್ಯಾಕೆಟ್ ಗಳು ಪತ್ತೆಯಾಗಿದೆ.

ಈ ಘಟನೆಗೆ ಸಂಬಂಧಿಸಿ ರ್ಮಾಯಿ ಕಾಲನಿ ನಿವಾಸಿಯೊಬ್ಬರ ವಿರುದ್ದ  ಕರ್ನಾಟಕ ಅಬಕಾರಿ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ. ಕಡಬ ಪೊಲೀಸರು ದಾಖಲಿಸಿರುವ ಎಫ್.ಐ. ಆರ್ ನಲ್ಲಿ ಕಡಬ ಪೇಟೆಯಿಂದ ವ್ಯಕ್ತಿಯೊಬ್ಬ ಮದ್ಯದ ಪ್ಯಾಕೇಟ್ ಗಳನ್ನು ಕೊಂಡೊಯ್ದು ಬೊಳ್ಳೂರು ಕ್ರಾಸ್ ಬಳಿ ಇಳಿದು ನಡೆದುಕೊಂಡು ಹೋಗುತ್ತಿದ್ದ ವೇಳೆ ಆರೋಪಿತನನ್ನು ವಶಕ್ಕೆ ಪಡೆದು ಆತನ ಕೈಯಲ್ಲಿದ್ದ ನೀಲಿ ಕೈಚೀಲವನ್ನು ಪರಿಶೀಲಿಸಿದಾಗ ಮದ್ಯದ ಬಾಟಲಿಗಳು ಪತ್ತೆಯಾಗಿವೆ. ಇದರ ಅಂದಾಜು ಮೌಲ್ಯ 2100 ರೂಪಾಯಿ ಆಗಬಹುದು ಎಂದು ಹೇಳಲಾಗಿದೆ.

- Advertisement -

Latest News

error: Content is protected !!