Friday, June 5, 2026
Homeಕರಾವಳಿಉಡುಪಿಉಡುಪಿ: ನಾವು ಯಾರ ಜೊತೆಯೂ ಕಾಲು ಕೆರೆದುಕೊಂಡು ತಗಾದೆಗೆ ಹೋಗಲ್ಲ: ಭಾರತದ ತಂಟೆಗೆ ಬಂದರೆ ಮುಖಮೂತಿ...

ಉಡುಪಿ: ನಾವು ಯಾರ ಜೊತೆಯೂ ಕಾಲು ಕೆರೆದುಕೊಂಡು ತಗಾದೆಗೆ ಹೋಗಲ್ಲ: ಭಾರತದ ತಂಟೆಗೆ ಬಂದರೆ ಮುಖಮೂತಿ ನೋಡಲ್ಲ: ರಾಜನಾಥ್‌ ಸಿಂಗ್

- Advertisement -
- Advertisement -

ಉಡುಪಿ: ಭಾರತ ಭಯೋತ್ಪಾದನೆ ನಿಗ್ರಹ ವಿಚಾರದಲ್ಲಿ ನಾಯಕತ್ವ ವಹಿಸಿದೆ. ನಾವು ಯಾರ ಜೊತೆಯೂ ಕಾಲು ಕೆರೆದುಕೊಂಡು ತಗಾದೆ ಶುರು ಮಾಡಲ್ಲ. ಭಾರತದ ತಂಟೆಗೆ ಬಂದರೆ ಮುಖಮೂತಿ ನೋಡದೆ ಉತ್ತರ ಕೊಡುತ್ತೇವೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ..

ಉಡುಪಿಯ ಮಣಿಪಾಲ ಮಾಹೆ ವಿವಿಯ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಾಜನಾಥ್ ಸಿಂಗ್, ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು. ಐದು ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಿ ಗೌರವಿಸಿ ಮಾತನಾಡಿದರು. ಈ ವೇಳೆ ಮಾತನಾಡಿದ ಅವರು ಐದು ವರ್ಷದಲ್ಲಿ ವಿಶ್ವದ ಮೂರನೇ ಆರ್ಥಿಕ ದೇಶವಾಗಿ ಭಾರತ ಸದೃಢವಾಗಿ ನಿಲ್ಲಲಿದೆ. ಭಾರತ 2047ಕ್ಕೆ ಪ್ರಪಂಚದ ಮೊದಲ ಸ್ಥಾನದಲ್ಲಿರಲಿದೆ ಎಂದರು.

- Advertisement -

Latest News

error: Content is protected !!