Thursday, May 2, 2024
Homeಕರಾವಳಿನಿರೂಪಕಿ ಅನುಶ್ರೀ ಹಾಗೂ ಬಾಲಿವುಡ್ ನಟನ ಬಗ್ಗೆ ಸ್ಪೋಟಕ ಮಾಹಿತಿ ಬಾಯ್ಬಿಟ್ಟ ಕಿಶೋರ್ ಶೆಟ್ಟಿ ಗರ್ಲ್...

ನಿರೂಪಕಿ ಅನುಶ್ರೀ ಹಾಗೂ ಬಾಲಿವುಡ್ ನಟನ ಬಗ್ಗೆ ಸ್ಪೋಟಕ ಮಾಹಿತಿ ಬಾಯ್ಬಿಟ್ಟ ಕಿಶೋರ್ ಶೆಟ್ಟಿ ಗರ್ಲ್ ಫ್ರೆಂಡ್ ಆಸ್ಕಾ !

spot_img
- Advertisement -
- Advertisement -

ಮಂಗಳೂರು : ಚಂದನವನದ ಡ್ರಗ್ಸ್ ದಂಧೆಯ ತನಿಖೆ ಇದೀಗ ಕಡಲ ತೀರಕ್ಕೂ ತಲುಪಿದೆ. ಮಂಗಳೂರು ಪೊಲೀಸರು ಕೂಡಾ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಡ್ಯಾನ್ಸರ್ ಕಿಶೋರ್ ಶೆಟ್ಟಿ, ಅಕೀಲ್ ನೌಶೀಲ್, ತರುಣ್ ರಾಜ್, ಮಣಿಪುರದ ಅಸ್ಕಾ, ಮುಹಮ್ಮದ್ ಶಾಕೀರ್, ಶಾನ್ ನವಾಜ್ ಹಾಗೂ ನೈಜೀರಿಯಾ ಪ್ರಜೆ ಸೇರಿದಂತೆ ಒಟ್ಟು 8 ಮಂದಿಯನ್ನು ​​ ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಈ ನಡುವೆ ಕಿಶೋರ್ ಶೆಟ್ಟಿಯ ಗರ್ಲ್ ಫ್ರೆಂಡ್ ಅಸ್ಕಾ ಮಹತ್ವದ ಮಾಹಿತಿಗಳನ್ನು ಬಾಯಿ ಬಿಟ್ಟಿದ್ದು, ಅನುಶ್ರೀಯನ್ನು ಒಂದ್ಸಲ ಪಾರ್ಟಿಯಲ್ಲಿ ನೋಡಿರುವುದಾಗಿ ಹೇಳಿಕೆ ಕೊಟ್ಟಿದ್ದಾಳಂತೆ. ಹೀಗಾಗಿ ಈ ಹೇಳಿಕೆ ಅನುಶ್ರೀಗೆ ಸಂಕಷ್ಟ ತಂದೊಡ್ಡುವ ಸಾಧ್ಯತೆಗಳಿದೆ. ಯಾಕಂದ್ರೆ ಅನುಶ್ರೀ ನಾನು ಪಾರ್ಟಿಗೆ ಹೋಗಿಯೇ ಇಲ್ಲ ಅಂದಿದ್ದರು.

ಮಣಿಪುರ ಮೂಲದ ಆಸ್ಕಾ ಹಲವು ವರ್ಷಗಳ ಹಿಂದೆಯೇ ಬೆಂಗಳೂರಿನಲ್ಲಿ ಬಂದು ನೆಲೆಸಿದ್ದಳು. ಆ ಬಳಿಕ ಕೆಲ ವರ್ಷಗಳಿಂದ ಮಂಗಳೂರಿನಲ್ಲಿ ವಾಸವಿದ್ದಳು. ಹಗಲು ವೇಳೆ ಸ್ಪಾ ಒಂದರಲ್ಲಿ ಕೆಲಸ ಮಾಡುತ್ತಿದ್ದ ಆಸ್ಕಾ, ರಾತ್ರಿ ಮಂಗಳೂರಿನ ಪಬ್​ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಳು. ಕಿಶೋರ್​ ಶೆಟ್ಟಿಯ ಪರಿಚಯವಾದ ಬಳಿಕ ಡ್ರಗ್ಸ್ ಪಾರ್ಟಿಗಳಿಗೆ ಪ್ರವೇಶ ನೀಡುತ್ತಿದ್ದಳು ಎನ್ನಲಾಗಿದೆ. ಡ್ರಗ್ ಟೆಸ್ಟ್ ಮಾಡಿಸಿದಾಗಲೂ ಪಾಸಿಟಿವ್ ಬಂದಿತ್ತು ಎಂದು ತಿಳಿದುಬಂದಿದೆ.

ಇನ್ನು ತನಿಖೆ ವೇಳೆ ಅನುಶ್ರೀ ಯನ್ನು ಒಮ್ಮೆ ನೋಡಿದ್ದೆನೆ ಎಂದು ಆಸ್ಕಾ ಸಿಸಿಬಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾಳೆ. ಅಲ್ಲದೆ ಬಾಲಿವುಡ್ ನ ನಟನೊಂದಿಗೆ ಗೋವಾ ಹಾಗೂ ಮುಂಬೈಗಳಲ್ಲಿ ಪಾರ್ಟಿ ಕೂಡ ಮಾಡಿದ್ದೆ ಎಂದು ಮಾಹಿತಿ ನೀಡಿದ್ದಾಳೆ ಎಂದು ಹೇಳಲಾಗಿದೆ.

- Advertisement -
spot_img

Latest News

error: Content is protected !!