Thursday, June 4, 2026
Homeಕರಾವಳಿಉಡುಪಿಉಡುಪಿ: ನೂರಕ್ಕೆ ನೂರು ನನಗೆ ಚುನಾವಣೆಯಲ್ಲಿ ಟಿಕೆಟ್ ಕೊಡ್ತಾರೆ ಎಂಬ ವಿಶ್ವಾಸವಿದೆ - ಶಾಸಕ ರಘುಪತಿ...

ಉಡುಪಿ: ನೂರಕ್ಕೆ ನೂರು ನನಗೆ ಚುನಾವಣೆಯಲ್ಲಿ ಟಿಕೆಟ್ ಕೊಡ್ತಾರೆ ಎಂಬ ವಿಶ್ವಾಸವಿದೆ – ಶಾಸಕ ರಘುಪತಿ ಭಟ್

- Advertisement -
- Advertisement -

ಉಡುಪಿ: ಬಿಜೆಪಿ ನಾಯಕತ್ವದ ಮೇಲೆ ನನಗೆ ವಿಶ್ವಾಸವಿದೆ. ಯಾರು ಕೆಲಸ ಮಾಡಿಲ್ವೋ ಆ ಶಾಸಕನನ್ನ ಬದಲಾವಣೆ ಮಾಡ್ಬಹುದು. ಆದ್ರೆ ನಾನು ಪ್ರತಿ ಹಂತದಲ್ಲೂ ಸಕ್ರಿಯವಾಗಿ ತೊಡಗಿಕೊಂಡು ಕ್ಷೇತ್ರದ ಜನರೊಂದಿಗೆ ಸಂಪರ್ಕದಲ್ಲಿದ್ದು ವಿಶಿಷ್ಟ ಕಾರ್ಯಕ್ರಮಗಳನ್ನ ಮಾಡಿದ್ದೇನೆ. ಹಾಗಾಗಿ ನನಗೆ ನೂರಕ್ಕೆ ನೂರರಷ್ಟು ಚುನಾವಣೆಯಲ್ಲಿ ಟಿಕೆಟ್‌ ಕೊಟ್ಟೇ ಕೊಡ್ತಾರೆ ಎಂಬ ವಿಶ್ವಾಸವಿದೆ ಎಂದು ಶಾಸಕ ರಘುಪತಿ ಭಟ್‌ ಹೇಳಿದ್ರು.

ಮಾಧ್ಯಮದೊಂದಿಗೆ ಮಾತನಾಡಿದ ಅವರು,ನನಗೆ ಟಿಕೆಟ್‌ ಸಿಗೋದು ಕಷ್ಟವಿಲ್ಲ. ನಾನು ಶಾಸಕನಾಗಿ ಯಾವತ್ತೂ ರೆಸ್ಟ್‌ ತಗೊಂಡಿಲ್ಲ. 2018 ಜೂನ್ ತಿಂಗಳಿಂದ ಜನರಿಗಾಗಿ ಓಟ ಶುರುಮಾಡಿದ್ದೇನೆ. ಹಾಗಾಗಿ ನನಗೆ ಟಿಕೆಟ್‌ ಸಿಗುವ ವಿಶ್ವಾಸವಿದೆ ಎಂದರು.

- Advertisement -

Latest News

error: Content is protected !!