Thursday, May 2, 2024
Homeತಾಜಾ ಸುದ್ದಿಗಲ್ಫ್ ನಲ್ಲಿದ್ದ ಪತ್ನಿಯನ್ನು ಊರಿಗೆ ಕರೆ ತಂದು ಹತ್ಯೆಗೈದ ಪತಿ

ಗಲ್ಫ್ ನಲ್ಲಿದ್ದ ಪತ್ನಿಯನ್ನು ಊರಿಗೆ ಕರೆ ತಂದು ಹತ್ಯೆಗೈದ ಪತಿ

spot_img
- Advertisement -
- Advertisement -

ಕೇರಳ; ಗಲ್ಫ್ ನಲ್ಲಿದ್ದ ಪತ್ನಿಯನ್ನು ಊರಿಗೆ ಕರೆ ತಂದು ಪತಿ ಹತ್ಯೆಗೈದ ಘಟನೆ ದಕ್ಷಿಣ ಕೇರಳದ ವರ್ಕಲಾದಲ್ಲಿ ನಡೆದಿದೆ.

25 ವರ್ಷದ ಯುವತಿ ನಿಗಿತಾ ಮತ್ತು 35ರ ಹರೆಯದ ನಾಗೇಶ್ ಗೆ ಎರಡು ತಿಂಗಳ ಹಿಂದೆ ದಾಂಪತ್ಯಕ್ಕೆ ಕಾಲಿಟ್ಟಿದ್ದರು. ಇಬ್ಬರೂ ಉದ್ಯೋಗ ನಿಮಿತ್ತ ಇಬ್ಬರೂ ಗಲ್ಫ್‌ ರಾಷ್ಟ್ರಕ್ಕೆ ತೆರಳಿದ್ದರು.

ಕಳೆದ ಕೆಲ ದಿನಗಳ ಹಿಂದೆ ಚಿಕಿತ್ಸೆಗೋಸ್ಕರ ಮತ್ತೆ ಸ್ವದೇಶಕ್ಕೆ ಮರಳಿದ್ದಾರೆ.ಈ ಸಂದರ್ಭದಲ್ಲಿ ಪತ್ನಿಯ ನಡತೆ ಮೇಲೆ ಅನುಮಾನ ವ್ಯಕ್ತಪಡಿಸಿರುವ ಪತಿ ಜಗಳವಾಡಿದ್ದಾನೆ. ಈ ಜಗಳ ತಾರಕಕ್ಕೇರಿದಾಗ ವಿದ್ಯುತ್ ಲ್ಯಾಂಪ್​​​​ನಿಂದ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಯುವತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ,ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಗಿ ಪೊಲೀಸರು ತಿಳಿಸಿದ್ದಾರೆ.ಆರೋಪಿ ಗಂಡನನ್ನು ಬಂಧಿಸಿರುವ ಪೊಲೀಸರು ಐಪಿಸಿ ಸೆಕ್ಷನ್​​ 302 ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -
spot_img

Latest News

error: Content is protected !!