Wednesday, June 3, 2026
Homeಅಪರಾಧಸ್ನಾನದ ಮನೆಯಲ್ಲಿದ್ದ ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ ಕೊಂದ ಪತಿ

ಸ್ನಾನದ ಮನೆಯಲ್ಲಿದ್ದ ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ ಕೊಂದ ಪತಿ

- Advertisement -
- Advertisement -

ಚಾಮರಾಜನಗರ:  ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇಲದಕುಪ್ಪೆ ಗ್ರಾಮದಲ್ಲಿ ಜಗಳ ವಿಪರೀತಗೊಂಡು ಪತಿಯೇ ಪತ್ನಿಯನ್ನು ಹತ್ಯೆಗೈದ ಘಟನೆ ನಡೆದಿದೆ.  

ಬಂಧಿತ ಆರೋಪಿ ಮಹದೇವಪ್ಪ (55) ಎಂದು ತಿಳಿದುಬಂದಿದೆ. ಮಹದೇವಮ್ಮ (45) ಮೃತ ಮಹಿಳೆ. ದಂಪತಿ ಕಿಲಗೆರೆ ಹಾಗೂ ಮಾದಲವಾಡಿ ಗ್ರಾಮದ ನಡುವೆ ಇರುವ ಬೇಲದಕುಪ್ಪೆಯ ಜಮೀನೊಂದರಲ್ಲಿ ವಾಸವಾಗಿದ್ದರು. ಇವರ ನಡುವೆ ಇಂದು ಮುಂಜಾನೆ ಏಕಾಏಕಿ ಜಗಳ ನಡೆದಿದ್ದು ಜಗಳ ವಿಕೋಪಕ್ಕೆ ಏರಿತ್ತು. 

ಈ ಸಂದರ್ಭದಲ್ಲಿ ಸ್ನಾನದ ಮನೆಯಲ್ಲಿದ್ದ ಪತ್ನಿ ಮಹದೇವಮ್ಮರನ್ನು ಪತಿ ಮಹದೇವಪ್ಪ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ನಂತರ ಪತಿ ಮಹದೇವಪ್ಪ ಪೊಲೀಸ್ ಠಾಣೆಗೆ ತೆರಳಿ ಶರಣಾಗಿರುವ ಘಟನೆ ನಡೆದಿದೆ. ಘಟನೆ ಸಂಬಂಧಿಸಿ ತೆರಕಣಾಂಬಿ ಪೊಲೀಸ್ ಠಾಣೆಗೆ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!