Wednesday, June 24, 2026
Homeಕರಾವಳಿಮಂಗಳೂರುಶಿರಾಡಿಯಲ್ಲಿ ಪತ್ನಿ ಮನೆಗೆ ಬಂದು ಪತಿ ಆತ್ಮಹ*ತ್ಯೆಗೆ ಶರಣು

ಶಿರಾಡಿಯಲ್ಲಿ ಪತ್ನಿ ಮನೆಗೆ ಬಂದು ಪತಿ ಆತ್ಮಹ*ತ್ಯೆಗೆ ಶರಣು

- Advertisement -
- Advertisement -

ಕಡಬ: ಪತ್ನಿ ಮನೆಗೆ ಬಂದು ಪತಿ ಆತ್ಮಹ*ತ್ಯೆಗೆ ಶರಣಾಗಿರುವ ಘಟನೆ ಶಿರಾಡಿಯಲ್ಲಿ ನಡೆದಿದೆ. ಶಿರಾಡಿ ನಿವಾಸಿ ಮಂಜು ನಾಯ್ಕ (49) ಮೃತರು.

ಮೃತ ಮಂಜು ನಾಯ್ಕ ಅವರು ಕಳೆದ ಕೆಲವು ಸಮಯದಿಂದ ಮದ್ಯಪಾನದ ವ್ಯಸನಕ್ಕೆ ತುತ್ತಾಗಿದ್ದರು. ಕುಡಿದ ಅಮಲಿನಲ್ಲಿ ಮನೆಯಲ್ಲಿ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ, ಅವರ ಪತ್ನಿ ಸುಶೀಲ ಅವರು ತನ್ನ ತಂದೆ ತನಿಯಪ್ಪ ಅವರ ಮನೆಯಲ್ಲಿ ವಾಸವಿದ್ದರು. ಪತ್ನಿಯ ತವರು ಮನೆಯಾದ ಶಿರಾಡಿ ಗ್ರಾಮದ ಬರಮೇಲು ಎಂಬಲ್ಲಿ ಮಂಜು ನಾಯ್ಕ ಅವರು ಕೂಡ ನೆಲೆಸಿದ್ದರು.

ಶುಕ್ರವಾರ ಸಂಜೆ ಬರಮೇಲು ಎಂಬಲ್ಲಿನ ತಾರಸಿ ಕಟ್ಟಡದ ಮೇಲ್ಭಾಗದ ಸಿಮೆಂಟ್ ಕಿಟಕಿಯ ತೂತಿಗೆ ಪ್ಲಾಸ್ಟಿಕ್ ಬೆಲ್ಟ್ ಬಳಸಿ ಮಂಜು ನಾಯ್ಕ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಮೃತರ ಪತ್ನಿ ಸುಶೀಲ ಅವರು ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

- Advertisement -

Latest News

error: Content is protected !!